Wednesday, April 9, 2025
Google search engine

Homeಅಪರಾಧತಂದೆಯನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಮಗ

ತಂದೆಯನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಮಗ

ಮಧ್ಯಪ್ರದೇಶ: ಖರ್ಚಿಗೆ ಹಣಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತಂದೆಯ ಬಳಿ ಖರ್ಚಿಗೆ 2 ಸಾವಿರ ರೂ ಕೇಳಿದ್ದಾನೆ, ಆದರೆ ತಂದೆ ತನ್ನ ಬಳಿ ಅಷ್ಟು ಹಣವಿಲ್ಲ ಎಂದಿದ್ದಾರೆ. ಬಾಬು ಚೌಧರಿ(50)ಕೊಲೆಯಾದ ವ್ಯಕ್ತಿ, ದೇಪಾಲ್​ಪುರ ಪ್ರದೇಶದಲ್ಲಿ ಜೂನ್ 15ರಂದು ಹತ್ಯೆಯಾಗಿದ್ದಾರೆ ಎಂದು ಎಸ್​ಪಿ ಹಿತಿಕಾ ವಸಲ್ ತಿಳಿಸಿದ್ದಾರೆ.

ಆ ಪ್ರದೇಶದಲ್ಲಿ ಪತ್ತೆಯಾದ ಸಾಕ್ಷ್ಯಗಳನ್ನು ಪರಿಗಣಿಸಿ, ವ್ಯಕ್ತಿಯ ಮಗ ಸೋಹನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಹನ್​ ಮಾದಕ ವ್ಯಸನಿಯಾಗಿದ್ದ , ಜಮೀನಿನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ, ಜೂನ್ 15 ರಂದು ತಂದೆಯ ಬಳಿ 2 ಸಾವಿರ ರೂ ಕೇಳಿದ್ದ, ತಂದೆ ನಿರಾಕರಿಸಿದ್ದರು.

ಕೋಪದಲ್ಲಿ ಅಲ್ಲೇ ಇದ್ದ ಕಲ್ಲಿನಿಂದ ತಂದೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular