Thursday, April 3, 2025
Google search engine

Homeರಾಜ್ಯರಾಜ್ಯ ಸರ್ಕಾರ ನಮಗೆ ಯಾವುದೇ ಪರಿಹಾರ ನೀಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್

ರಾಜ್ಯ ಸರ್ಕಾರ ನಮಗೆ ಯಾವುದೇ ಪರಿಹಾರ ನೀಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್

ಮೈಸೂರು : ಅರಮನೆ ಮೈದಾನ ಬಳಸಿಕೊಳ್ಳುವ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿರುವ ವಿಚಾರವಾಗಿ ರಾಜ್ಯ ಸರ್ಕಾರ ನಮಗೆ ಯಾವುದೇ ಪರಿಹಾರ ಕೊಡುವ ಅಗತ್ಯವಿಲ್ಲ ಎಂದು ಸುತ್ತುರಿನಲ್ಲಿ ಬಿಜೆಪಿಯ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದರು.

ಇಂದು ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಯದುವೀರ್ ಒಡೆಯರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪರಿಹಾರ ಕೊಡುವ ಬದಲು ಟಿಡಿಆರ್ ಸರ್ಟಿಫಿಕೇಟ್ ಕೊಟ್ಟರೆ ಸಾಕು. ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಇದ್ದಾಗ ನಮ್ಮ ಮುಂದೆ ಯಾಕೆ ಬರುತ್ತಾರೆ? ಸಾರ್ವಜನಿಕ ಹಿತದೃಷ್ಟಿಗಾಗಿ ಅಂದರೆ ನಮ್ಮ ಆಸ್ತಿನೆ ಬೇಕಾ? ಎಂದು ಪ್ರಶ್ನಿಸಿದರು.

ಈ ಹಿಂದೆ ಸದಾಶಿವ ನಗರ ಕೂಡ ಬೆಂಗಳೂರು ಅರಮನೆಗೆ ಸೇರಿತ್ತು. ನಾವು ಆಗಲೇ ಸಾಮಾಜಿಕ ನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ. ಸಾಮಾನ್ಯರಿಗೆ ಏನು ಕಾನೂನು ಇದೆ ನಮಗೂ ಅದೇ ಕಾನೂನು ಅಲ್ವಾ. ಟಿಡಿಆರ್‌ ಬದಲು ನಗದು ರೂಪದಲ್ಲಿ ಪರಿಹಾರ ಹೇಳಬಹುದಿತ್ತು? ಸರ್ಕಾರದ ಖಜಾನೆಗೆ ಧಕ್ಕೆ ಆಗುತ್ತೆ ಅಂತ ಟಿಡಿಆರ್‌ ಗೆ ಒಪ್ಪಿದ್ದೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular