Sunday, April 20, 2025
Google search engine

Homeರಾಜ್ಯಇಂದು ಸಂಜೆಯೊಳಗೆ ತಮಿಳುನಾಡಿಗೆ ಹೋಗುವ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತಿರ್ಮಾನ: ಶಾಸಕ ರಮೇಶ್ ಬಾಬು...

ಇಂದು ಸಂಜೆಯೊಳಗೆ ತಮಿಳುನಾಡಿಗೆ ಹೋಗುವ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತಿರ್ಮಾನ: ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ

ಮಂಡ್ಯ: ಇಂದು ಸಂಜೆಯೊಳಗೆ ತಮಿಳುನಾಡಿಗೆ ಹೋಗುವ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತಿರ್ಮಾನ ಕೈಗೊಂಡಿದೆ ಎಂದು  ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ‌. ಕಾವೇರಿ ನ್ಯಾಯಾಂಗದ ಅಂತಿಮ ತೀರ್ಪಿನ ಅನುಗುಣವಾಗಿ ಜೂನ್ ನಲ್ಲಿ 10 ಟಿಎಂಸಿ, ಜುಲೈನಲ್ಲಿ 34 ಟಿಎಂಸಿ, ಅಗಸ್ಟ್ ನಲ್ಲಿ 50 ಟಿಎಂಸಿ ನೀರು ಕೊಡಲು ಒತ್ತಡವಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ, ನೀರು ಕೊಡುವ ಬಗ್ಗೆ ಹಿಂದಿನಿಂದಲೂ ತಿರ್ಮಾನವಾಗಿದೆ ಎಂದರು.

ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡ್ರು, ಸಿದ್ದರಾಮಯ್ಯ ಸಿಎಂ ಆಗಿದಾಗಿನಿಂದಲೂ ನಡೆದುಕೊಂಡು ಬಂದಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಸ್ವಲ್ಪ ನೀರನ್ನು ಕೊಟ್ಟಿದ್ದೇವೆ. ತಮಿಳುನಾಡು ಸರ್ಕಾರ ಕೇಂದ್ರದ ಮುಂದೆ  CWC ಮುಂದೆ ಹೋಗಿದೆ. ಈ ಹಿನ್ನಲೆ CWC ಸೂಚನೆಗೆ ಅನುಗುಣವಾಗಿ 10-12 ಟಿಎಂಸಿ ನೀರು ಬಿಡಲಾಗಿದೆ ಎಂದರು.

ತಮಿಳುನಾಡು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದೆ. ಇವತ್ತು ವಿಚಾರಣೆ ಹಂತದಲ್ಲಿದೆ. CWC ತಿರ್ಮಾನವನ್ನ ಅನುಷ್ಠಾನ ಗೊಳಿಸಿಲ್ಲವಾದರೆ ಸುಪ್ರೀಂ ಕೋರ್ಟ್ ನಮ್ಮ ಮನವಿಯನ್ನ ಗಂಭೀರವಾಗಿ ಪರಿಗಣಿಸಲ್ಲ ಎಂಬುದು ತಜ್ಞರ ಮಾತು ಎಂದು ಹೇಳಿದರು.

ಬಿಜೆಪಿಯವರ ಹೋರಾಟ ಚುನಾವಣೆಗಾಗಿ ಮಾಡ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ನಿಮ್ಮದೆ ಸರ್ಕಾರ ಇತ್ತು. 27 ಜನ ಎಂಪಿಗಳು ಇದ್ರಿ. ನೀವು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಒತ್ತಡ ಹೇರಬಹುದಾಗಿತ್ತು ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್ ತೀರ್ಪು ಇದೆ. CWC ಅವರ ಗೈಡ್ ಲೈನ್ ಪ್ರಕಾರ 10ರಿಂದ 12 TMC ನೀರು ಕೊಟ್ಟಿದ್ದೇವೆ. ಕಬಿನಿ, ಕಾವೇರಿಯಿಂದ ಬಿಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯುತ್ತಿದ್ದೇವೆ. ಸಂಜೆಯೊಳಗೆ ನೀರು ನಿಲ್ಲಿಸುವ ತಿರ್ಮಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

RELATED ARTICLES
- Advertisment -
Google search engine

Most Popular