Monday, December 2, 2024
Google search engine

Homeಆರೋಗ್ಯಡೆಂಗ್ಯೂವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದ ರಾಜ್ಯ ಸರ್ಕಾರ

ಡೆಂಗ್ಯೂವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಅಧಿಕವಾಗುತ್ತಿರುವ ನಡುವೆ ರಾಜ್ಯ ಸರ್ಕಾರವು ಮಂಗಳವಾರ ಡೆಂಗ್ಯೂವನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದೆ.

ಹಾಗೆಯೇ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ಗೆ ತಿದ್ದುಪಡಿ ಮಾಡಿದ್ದು, ಆಗಸ್ಟ್ 31ರ ಕರ್ನಾಟಕ ಗೆಜೆಟ್ ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಮುಂದೆ ನೈರ್ಮಲ್ಯ(ಸ್ವಚ್ಚತೆ) ಕಾಪಾಡದವರಿಗೆ ದಂಡ ಬೀಳಲಿದೆ.

ಮನೆಗಳಿಗೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ನಿಯಮ ಉಲ್ಲಂಘನೆ ಮಾಡಿದರೆ 400 ರೂಪಾಯಿ ದಂಡ, ನಗರ ಪ್ರದೇಶ ಗ್ರಾಮಾಂತರದಲ್ಲಿ ಓಳಾಂಗಣ ಹಾಗೂ ಹೊರಾಂಗಣಕ್ಕೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ.

ಡೆಂಘೀ ನಿಯಂತ್ರಣ: ನಿಯಮಗಳನ್ನು ತಿಳಿಯಿರಿ
ಆಯಾ ಜಾಗದಲ್ಲಿ ಸೊಳ್ಳೆ ಬಾರದಂತೆ ಆ ಜಾಗದ ಮಾಲೀಕರು ಕ್ರಮ ವಹಿಸಬೇಕಾಗುತ್ತದೆ. ಹಾಗೆಯೇ ಸೊಳ್ಳೆಗಳ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡಬಾರದು. ಖಾಲಿ ಜಾಗದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸ್ವತ್ತಿನ ಮಾಲೀಕರು ನಿಗಾ ವಹಿಸದಿದ್ದರೆ, ಸಂಬಂಧ ಪಟ್ಟ ಅಧಿಕಾರಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು. ರಾಸಾಯನಿಕವನ್ನು ಸಿಂಪಡಿಸಿ, ಇದಕ್ಕೆ ಖರ್ಚಾದ ವೆಚ್ಚವನ್ನು ಸಂಬಂಧ ಪಟ್ಟ ಸ್ವತ್ತಿನ ಮಾಲೀಕರು ನೀಡುವಂತೆ ಕ್ರಮ ವಹಿಸಬೇಕು.

ಬಿಬಿಎಂಪಿ ಮತ್ತು ಮನೆಗಳಲ್ಲಿ ತೆರೆದ ಸ್ಥಳದಲ್ಲಿ ನಿಂತಿರುವ ನೀರು ತೆರವು ಮಾಡುವ ಜವಾಬ್ದಾರಿಯನ್ನು ಆಯಾ ಮಾಲೀಕರೇ ಹೊರಬೇಕು. ಸರಿಯಾಗಿ ಡೆಂಘೀ ನಿಯಂತ್ರಣ ಕ್ರಮಕೈಗೊಳ್ಳಲಾಗುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನಿಯಮವನ್ನು ಉಲ್ಲಂಘಿಸಿದವರಿಗೆ ಈ ಮೇಲೆ ತಿಳಿಸಿದಂತೆ ದಂಡ ವಿಧಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular