ಮಂಡ್ಯ: ರಾಜ್ಯ ಸರ್ಕಾರ ಊಸರವಳ್ಳಿ ತರ ಕಣ್ಣಾಮುಚ್ಚಾಲೆ ಆಡ್ತಿದೆ. ರಾಜ್ಯದ ಜನರ ಗುಲಾಮರಾಗಬೇಕಿತ್ತು ಅಧಿಕಾರದ ಗುಲಾಮರಾಗಿದ್ದಿರಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿಗಾಗಿ ರೈತ ಹಿತರಕ್ಷಣಾ ಸಮಿತಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಅವರ ಹೋರಾಟಕ್ಕೆ ನಾನು ಬದ್ದನಿದ್ದೇನೆ. ನಾವೇಲ್ಲರು ಸಹ ಸಂರಕ್ಷಣಾ ಸಮಿತಿ ಮಾಡಿದ್ವಿ. ಅಧಿಕಾರ, ಸ್ಥಾನ, ತಮ್ಮ ಅಸ್ತಿತ್ವಕ್ಕಾಗಿ ಮೂರು ಪಕ್ಷಗಳು ನಮಗೆ ಅನ್ಯಾಯ ಮಾಡ್ತಿದೆ ಎಂದು ಹರಿಹಾಯ್ದರು.
ತಮಿಳುನಾಡಿನಲ್ಲಿ ಈ ರೀತಿ ಇಲ್ಲ, ಅವರ ಹಕ್ಕು ಅವರು ಪಡೆಯುತ್ತಾರೆ. ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕು. ಸುಪ್ರೀಂ ಕೋರ್ಟ್ ಅವರು ನಾವು ತಜ್ಞರಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಅಂಕಿ ಅಂಶಗಳ ಕಲೆಕ್ಟ್ ಮಾಡಿ ತಿರ್ಮಾನ ತೆಗೆದುಕೊಳ್ಳಬೇಕು. ನಮ್ಮ ನೀರು ನಮ್ಮ ಹಕ್ಕು ಅಂತ ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿದ್ರು ಏನಾಯ್ತು? ನಮ್ಮ ಲೋಟದಲ್ಲಿ ನೀರಿಲ್ಲ ಬೇರೆಯವರಿಗೆ ನೀರು ಕೊಡ್ತಿದ್ದಿರಿ ಎಂದರು.
ಅಧಿಕಾರ ಹೋಗುತ್ತದೆ ಅಂತ ತಮಿಳುನಾಡಿಗೆ ನೀರು ಬಿಡ್ತಿದ್ದಾರೆ. ಇವರು ಧೈರ್ಯ ಮಾಡಿ ಕಾವೇರಿಗಾಗಿ ಹೋರಾಟ ಮಾಡಿ. ಸರ್ಕಾರವನ್ನ ವಜಾ ಮಾಡಿದ್ರೆ ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ಅಧಿಕಾರದ ಭಯ ಇವರಿಗೆ. ತಮಿಳುನಾಡಿನವರು ಕೇಂದ್ರಕ್ಕೆ ಹೆದರಿಸಿದ್ದಾರೆ. ಸಾಕಷ್ಟು ಅಧಿಕಾರ, ಆಸ್ತಿ ಮಾಡಿದ್ದಿರಿ ಸಾಕು ಈಗ ರೈತರ ಹಿತ ರಕ್ಷಣೆ ಮಾಡಿ ಎಂದು ಒತ್ತಾಯಿಸಿದರು.