ಹೊಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರು ಮತ್ತು ಜಿಲ್ಲಾ,ತಾಲೂಕು ಸಂಘಗಳ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿರುವ 5 ಮಂದಿಯ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ಕೆ.ಆರ್.ನಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್ ಒತ್ತಾಯಿಸಿದ್ದಾರೆ
ಕೈಗಾರಿಕೆ ಇಲಾಖೆಯ ಅಧಿನ ಕಾರ್ಯದರ್ಶಿ ಶಾಂತರಾಮು, ಸರ್ಕಾರದ ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರು ಪಶು ಆಸ್ವತ್ರೆಯ ಜಾನುವಾರು ಅಧಿಕಾರಿ ಮೆಹಬೂಬ್ ಪಾಷ, ಭೂ ಮಾಪನ ಸೂಪರ್ ವೈಜರ್ ಶಿವರುದ್ರಯ್ಯ,ರಾಮನಗರದ ಅವ್ವೇರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ನಿಂಗೇಗೌಡರ ವಿರುದ್ದ ಕ್ರಮಜರುಗಿಸುವಂತೆ ಆಗ್ರಹಿಸಿದ್ದಾರೆ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮಾರ್ಗದರ್ಶನದಲ್ಲಿ ನೌಕರರ ಹಿತಕಾಯುವುದು,ಅವರ ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ ಅದರೆ ಇಷ್ಟು ಮಂದಿಯು ಸಂಘದ ರಾಜ್ಯಾಧ್ಯಕ್ಷರು ಮತ್ತು ರಾಜ್ಯದ ಎಲ್ಲಾ ಜಿಲ್ಲೆಯ ತಾಲೂಕು ಸಂಘದ ವಿರುದ್ದ ಆಧಾರ ರಹಿತವಾದ ಆರೋಪಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತೇಜೋವದೆ ಮಾಡಿದ್ದು ಇವರ ವಿರುದ್ದ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಅರುಣ್ ಕುಮಾರ್ ರಾಜ್ಯ ಸಂಘವನ್ನು ಒತ್ತಾಯಿಸಿದ್ದಾರೆ.