Thursday, April 17, 2025
Google search engine

Homeರಾಜ್ಯಮೈಕ್ರೋ ಚಿಪ್‌ ಜೊತೆಗೆ ಕ್ಯೂಆರ್‌ ಕೋಡ್‌ ಅಳವಡಿಸಿದ ಡಿಎಲ್‌ , ಆರ್‌ಸಿ ಸಾರ್ಟ್‌ ಕಾರ್ಡ್‌ ವಿತರಿಸಲು...

ಮೈಕ್ರೋ ಚಿಪ್‌ ಜೊತೆಗೆ ಕ್ಯೂಆರ್‌ ಕೋಡ್‌ ಅಳವಡಿಸಿದ ಡಿಎಲ್‌ , ಆರ್‌ಸಿ ಸಾರ್ಟ್‌ ಕಾರ್ಡ್‌ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ ವಾಹನ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರದ ಸ್ವರೂಪ ಬದಲಿಸಲಾಗುತ್ತಿದ್ದು, ಮೈಕ್ರೋ ಚಿಪ್‌ ಜತೆಗೆ ಕ್ಯೂಆರ್‌ ಕೋಡ್‌ ಅಳವಡಿಸಿದ ಡಿಎಲ್‌ ಮತ್ತು ಆರ್‌ಸಿ ಸಾರ್ಟ್‌ ಕಾರ್ಡ್‌ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ದೇಶದೆಲ್ಲೆಡೆ ಡಿಎಲ್‌ ಮತ್ತು ಆರ್‌ಸಿಗಳ ಸ್ವರೂಪ ಒಂದೇ ರೀತಿಯಲ್ಲಿರಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮ ಅನುಷ್ಠಾನಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.

ಎಂಒಆರ್‌ಟಿಎಚ್‌ ನೀಡಿರುವ ಮಾರ್ಗಸೂಚಿಯಂತೆ ಡ್ರೈವಿಂಗ್‌ ಲೈಸೆನ್ಸ್ ಮತ್ತು ರಿಜಿಸ್ಟ್ರೇಷನ್‌ ಸರ್ಟಿಫಿಕೆಟ್‌ ಮುದ್ರಿಸಿ, ವಿತರಿಸುವ ಖಾಸಗಿ ಸಂಸ್ಥೆಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್‌ನಿಂದ ಹೊಸ ಬಗೆಯ ಡಿಎಲ್‌ ಮತ್ತು ಆರ್‌ಸಿ ವಿತರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಹೊಸಬಗೆಯ ಡಿಎಲ್‌ನಲ್ಲಿ ಹಲವು ವಿವರಗಳನ್ನು ಅಳವಡಿಸಲಾಗುತ್ತಿದೆ. ಈವರೆಗೆ ಡಿಎಲ್‌ನಲ್ಲಿ ಚಾಲಕರ ಹೆಸರು, ಜನ್ಮ ದಿನಾಂಕ, ವಿಳಾಸ, ರಕ್ತದ ಗುಂಪು ವಿವರಗಳು ಇರುತ್ತಿದ್ದವು. ಹೊಸ ಡಿಎಲ್‌ನಲ್ಲಿ ಆ ವಿವರಗಳ ಜತೆಗೆ ಡಿಎಲ್‌ ಹೊಂದಿರುವವರು ಅಂಗಾಂಗ ದಾನಿಯಾಗಿದ್ದಾರೆಯೇ ಎಂಬುದನ್ನು ಉಲ್ಲೇಖಿಸಲಾಗುತ್ತದೆ. ಜತೆಗೆ ಡಿಎಲ್‌ ಹೊಂದಿರುವವರ ಮೊಬೈಲ್‌ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣದಲ್ಲಿ ಮಾಡಬಹುದಾದ ಮೊಬೈಲ್‌ ಕರೆ ಸಂಖ್ಯೆಗಳನ್ನೂ ನಮೂದಿಸಲಾಗುತ್ತದೆ.

ಸದ್ಯ ಇರುವ ಡಿಎಲ್‌ ಮತ್ತು ಆರ್‌ಸಿಯಲ್ಲಿ ಒಂದು ಬದಿಯಲ್ಲಿ ಮಾತ್ರ ಎಲ್ಲ ವಿವರಗಳಿದ್ದು, ಇನ್ನೊಂದು ಬದಿಯಲ್ಲಿ ಮೈಕೋಚಿಪ್‌ ಅಳವಡಿಸಲಾಗಿದೆ. ಹೊಸ ಡಿಎಲ್‌ ಮತ್ತು ಆರ್‌ಸಿಯ ಎರಡೂ ಬದಿಯಲ್ಲಿ ವಾಹನ ಮತ್ತು ವಾಹನ ಮಾಲೀಕರ ಅಥವಾ ಚಾಲಕರ ವಿವರ ನಮೂದಿಸಲಾಗುತ್ತದೆ. ಡಿಎಲ್‌ ಮತ್ತು ಆರ್‌ಸಿಗಳನ್ನು ಲೇಸರ್‌ ಪ್ರಿಂಟಿಂಗ್‌ನಲ್ಲಿ ಮುದ್ರಿಸಲಾಗುತ್ತದೆ. ಇನ್ನು ಕ್ಯೂಆರ್‌ ಕೋಡನ್ನು ಸ್ಕ್ಯಾನ್‌ ಮಾಡಿದರೆ ಡಿಎಲ್‌ ಮತ್ತು ಆರ್‌ಸಿಗೆ ಸಂಬಂಧಿಸಿದ ಎಲ್ಲ ವಿವರಗಳು ತಿಳಿಯುವಂತೆ ಮಾಡಲಾಗುತ್ತದೆ.

ಈವರೆಗೆ ಡಿಎಲ್‌ ಮತ್ತು ಆರ್‌ಸಿಯಲ್ಲಿ ವಾಹನ ಮತ್ತು ಚಾಲಕರ ಸಂಪೂರ್ಣ ವಿವರ ಇರುತ್ತಿರಲಿಲ್ಲ. ಹೊಸ ಡಿಎಲ್‌ ಮತ್ತು ಆರ್‌ಸಿಯಲ್ಲಿ ಚಾಲಕರು ಯಾವ ದಿನ, ಯಾವ ರೀತಿಯ ಸಂಚಾರ ನಿಯಮ ಉಲ್ಲಂಸಿದ್ದಾರೆ, ಅದಕ್ಕೆ ದಂಡ ಪಾವತಿಸಿದ್ದಾರೆಯೇ ಎಂಬಂತಹ ವಿವರಗಳು ದೊರೆಯಲಿದೆ. ಈ ವಿವರಗಳನ್ನು ಸಾರಿಗೆ ಇಲಾಖೆ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡಲಿದೆ. ಡಿಎಲ್‌ ಹೊಂದಿರುವವರ ವಿವರಗಳ ಜೊತೆಗೆ, ಅವರ ಮೈಯಲ್ಲಿರುವ ಗುರುತುಗಳನ್ನೂ ನಮೂದಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular