Friday, April 11, 2025
Google search engine

Homeಅಪರಾಧಲಂಚವಾಗಿ 5 ಕೆಜಿ ಆಲೂಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

ಲಂಚವಾಗಿ 5 ಕೆಜಿ ಆಲೂಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

ಲಕ್ನೋ: ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ.

ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಲಂಚಕ್ಕಾಗಿ ‘ಆಲೂಗಡ್ಡೆ’ ಎಂಬ ಪದವನ್ನು ಕೋಡ್‌ ಆಗಿ ಬಳಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಇಲಾಖಾ ತನಿಖೆಗೂ ಸೂಚಿಸಲಾಗಿದೆ.

ವೈರಲ್ ಆಡಿಯೋದಲ್ಲಿ ಆರೋಪಿ ಪೋಲೀಸ್‌, ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ಹೇಳುತ್ತಾರೆ. 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ರೈತರ ಹೇಳುತ್ತಾರೆ. ಅದಕ್ಕೆ ಪೊಲೀಸ್‌ ಅಧಿಕಾರಿ ಕೋಪಗೊಂಡು, ಕೊನೆಗೆ 3 ಕೆಜಿಗೆ ಒಪ್ಪಂದ ಅಂತಿಮವಾಗುತ್ತದೆ.

RELATED ARTICLES
- Advertisment -
Google search engine

Most Popular