ತುಮಕೂರು: ಸಮೀಕ್ಷೆಯನ್ನು ಸಮಿಕ್ಷೆಯಾಗಿಯೇ ನೋಡಬೇಕು ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಕುರಿತ ಸಮೀಕ್ಷೆ ಬಗ್ಗೆ ಮಾತನಾಡಿ, ಅಸೆಂಬ್ಲಿ ಚುನಾವಣೆಯಲ್ಲಿ ಒಂದು ಚಾನಲ್ ಬಿಟ್ರೆ ಉಳಿದೆಲ್ಲಾ ಚಾನಲ್ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳ್ತಾ ಇದ್ರು. ನಮಗೆ 50-60 ಸೀಟ್ ಬರುತ್ತೆ ಅಂತಾ ಹೇಳ್ತಾ ಇದ್ರು. ಒಂದು ಚಾನಲ್ ಮಾತ್ರ 135 ಸೀಟ್ ಅಂತಾ ಹೇಳ್ತಾ ಇತ್ತು. ಕೆಲವು ಬಾರಿ ಸಮಿಕ್ಷೆ ಉಲ್ಟಾ ಆಗುತ್ತೆ, ಸಕ್ಸಸ್ ಆಗುತ್ತೆ. ಅದಕ್ಕೆ ಅದನ್ನು ಸಮೀಕ್ಷೆ ಅನ್ನೋದು, ರಿಸೆಲ್ಟ್ ಅಂತಾ ಹೇಳೊದಿಲ್ಲ ಎಂದರು.
ಇಂಡಿಯಾ ಅಧಿಕಾರ ಹಿಡಿಯುವ ಬಗ್ಗೆ ನನಗೆ ವಿಶ್ವಾಸ ಇದೆ. 10ವರ್ಷ ಆಗಿದೆ ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಮನಮೋಹನ್ ಸಿಂಗ್ ಇದ್ದಾಗ ಹತ್ತು ವರ್ಷ ಆಗಿತ್ತು. ಆಗ ಜನ ಬದಲಾವಣೆ ಬಯಸಿದ್ದರು. ಆಗ ನರೇಂದ್ರ ಮೋದಿ ಅವರಿಗೆ ಅವಕಾಶ ಕೊಟ್ಟಿದ್ರು. ಈ ಬಾರಿ ಜನ ಬದಲಾವಣೆ ಬಯಸುತ್ತಾರೆ ಅಂತಾ ಅಂದುಕೊಂಡಿದ್ದೇನೆ ನಾನು.
ಭಾರತ ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಎಲ್ಲಾ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಅವರು ಇರುವಾಗಲೂ ಒಂದಷ್ಟು ಮಾಡಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಆದರೆ ಅಡಿಪಾಯ ಯಾರದು..? ಅಡಿಪಾಯ ಹಾಕಿದವರು ಇದ್ದಾರಲ್ಲಾ. ಎಲ್ಲರ ಉದ್ದೇಶ ಒಂದೇ, ಭಾರತ ಬೆಳೆಯಬೇಕು, ಬಲಿಷ್ಠ ರಾಷ್ಟ್ರ ಆಗಬೇಕು. ಅದಕ್ಕೆ ನಾನು..ನೀವು, ಎಲ್ಲಾರು ಷೇರು ತಗೋಬಹುದು ಎಂದು ಹೇಳಿದರು.
ಶಕ್ತಿ ಯೋಜನೆ ವಿರುದ್ಧ ಆಟೋ ಚಾಲಕರ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಮಹಿಳೆಯರಿಗೆ ಸಹಾಯವಾಗಲು ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಆಟೋದವರನ್ನು ಉದ್ದೇಶ ಇಟ್ಟಿಕೊಂಡು ಮಾಡಿಲ್ಲ. ಅವರ ಕಷ್ಟ ಏನಿದೆಯೋ ಕೇಳಿಕೊಂಡು, ಅದನ್ನು ಬಗೆಹರಿಸೋಣ ಎಂದು ತಿಳಿಸಿದರು.
ಬಿ.ಆರ್ ಪಾಟೀಲ್ ರಾಜೀನಾಮೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕ್ಷಮೆ ಯಾರು ಕೊಡಬೇಕಾಗಿಲ್ಲ. ಕ್ಷೇಮೆ ಕೇಳಿ ಅಂತಾ ಯಾರು ಹೇಳಿಲ್ಲ. ಬೇರೆ ಉದ್ದೇಶಕ್ಕೆ ನಾವು ಈ ರೀತಿ ಮಾಡಿಲ್ಲ ಅಂತಾ ಹೇಳಿದ್ದಾರೆ ಬಿಟ್ರೆ. ಅದಕ್ಕೆ ಯಾರು ಕ್ಷಮೆ ಕೇಳಬೇಕಾಗಿಲ್ಲ. ಸಭೆ ಕರೆಯಿರಿ ಅಂತಾ ಹೇಳೋದು ಶಾಸಕರ ಹಕ್ಕು. ಯಾವ ಪಕ್ಷದಲ್ಲಾಗಿರಬಹುದು ಸಭೆ ಕರೀರಿ ಅಂದಾಗ ನಾಯಕರು ಬನ್ನಿ ಅಂತಾ ಹೇಳ್ತಾರೆ. ಅದಕ್ಕೆ ಹೆಚ್ಚು ಅರ್ಥೈಸೋದು ಅವಶ್ಯಕತೆ ಇಲ್ಲಾ ಎಂದು ಹೇಳಿದರು.