ಮೈಸೂರು: ಆಗಸ್ಟ್ 15, 2024 ರಂದು ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು, ಮೈಸೂರಿನ ರುಡ್ ಸೆಟ್ (ಧರ್ಮಸ್ಥಳ ಪ್ರಾಯೋಜಿತ ಅಂಗ ಸಂಸ್ಥೆ) ಯಲ್ಲಿ ಪಿ. ಇ. ಎಸ್ ವಿಶ್ವ ವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಜಿ. ಪಾಂಡುರಂಗ ಮೂರ್ತಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಮುಂಜಾನೆ 8.15ಕ್ಕೆ ಧ್ವಜಾರೋಹಣ ನೆರವೇರಿಸಿ, ಮಾತನಾಡುತ್ತಾ, ಅಂದು ಸಂಗೊಳ್ಳಿ ರಾಯಣ್ಣ ಬ್ರಿಟಿಷ್ ರ ಕುತಂತ್ರ ದಿಂದ ನೇಣಿಗೆ ಕೊರಳೊಡ್ದುವ ಮುನ್ನ “ಇದು ನನ್ನ ಅಂತ್ಯವಲ್ಲ.. ಆರಂಭ” ನನ್ನ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ನನ್ನ ನಾಡಿನ ‘ಪೂಜ್ಯ ಮಾತೆಯರ ಗರ್ಭದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ’.. ಪ್ರತೀ ಮನೆಯಲ್ಲೂ ರಾಯಣ್ಣ ಮತ್ತೆ ಜನ್ಮ ತಾಳಲಿ ಎಂದಷ್ಟೇ ಪ್ರಾರ್ಥಿಸಿ ಎಂದು ನುಡಿದ ಕ್ರಾಂತಿ ವೀರನ ಆ ಉಕ್ತಿ ಯಂತೆ ಆತನ ಜನ್ಮ ದಿನದಂದೇ ಭಾರತ ಸ್ವತಂತ್ರವಾಯಿತು ಅಂತೆಯೇ, ಈ ದೀರೋದಾತ್ತ ಸೇನಾನಿ ನೇಣಿಗೆ ಕೊರಳೊಡ್ಡಿದ ದಿನವೇ ಭಾರತ ಗಣತಂತ್ರ ರಾಜ್ಯವಾಯಿತು ಎಂದು ತಮ್ಮ ದೇಶಭಕ್ತಿಯ ಶಕ್ತಿಯುತ ಭಾಷಣದಲ್ಲಿ ಪ್ರಸ್ತುತ ಪಡಿಸಿದರು.
ಮುಂದುವರೆದು, 78ನೇ ಸ್ವಾತಂತ್ರ್ಯ ದ ಈ ಸಂಭ್ರಮಾಚರಣೆಯ ದಿನದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಇನ್ನೂ ಹಲವು ವೀರಾಗ್ರಣಿ ಗಳನ್ನು ಸ್ಮರಿಸುವ ಮೂಲಕ ಅವರಿಗೆ ಆತ್ಮಪೂರ್ವಕ ನಮನಗಳನ್ನು ಸಲ್ಲಿಸುವ ಮೂಲಕ ದೇಶಾಭಿಮಾನವನ್ನು ಮರೆಯಿರಿ ಎಂದು ಪ್ರತಿಷ್ಠಿತ ರುಡ್ ಸೆಟ್ ಸಂಸ್ಥೆಯ ಎಲ್ಲಾ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.

ಪ್ರಸ್ತುತ ಭ್ರಷ್ಟ ರಾಜಕೀಯ ವ್ಯವಸ್ಥೆ ಯಿಂದ ಸಮಾಜ ಮಲಿನ ಗೊಳ್ಳುತ್ತಿದ್ದು, ಯುವಪೀಳಿಗೆಯು ಇದರಿಂದ ಎಚ್ಚರಗೊಂಡು ಸ್ವಾರ್ಥ ತ್ಯಾಗ ಮತ್ತು ದೇಶ ಪ್ರೇಮ ಎಂಬ ದ್ಯೇಯೋದ್ದೇಶ ಗಳನ್ನು ಪಾಲಿಸುವ ಮೂಲಕ ನಿರ್ದಿಷ್ಟ ಜೀವನ ಕಟ್ಟಿಕೊಳ್ಳಬೇಕು ಎಂದು ಕೌಶಲ್ಯ ಮತ್ತು ಸ್ವಉದ್ಯೋಗ ತರಬೇತಿಯಲ್ಲಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ರುಡ್ ಸೆಟ್ ಸಂಸ್ಥೆಯ ಕೌಶಲ್ಯ ತರಬೇತಿಯಲ್ಲಿ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನ ದ ಸಮೀಕರಣಗಳನ್ನು ಜಂಟಿ ಸಹಯೋಗದಲ್ಲಿ ಪ್ರತಿಷ್ಠಿತ ನಮ್ಮ ಪಿ.ಎಸ್ ವಿಶ್ವ ವಿದ್ಯಾಲಯವು ನಿರ್ದಿಷ್ಟ ಪ್ರಸ್ತಾವನಾ ಯೋಜನೆಗಳ ಮೂಲಕ ಪ್ರಾಜೆಕ್ಟ್ ಅನುಷ್ಠಾನ ಹಾಗು ವಿಚಾರ ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅಭಯವಿತ್ತರು.
ಕಾರ್ಯಕ್ರಮದಲ್ಲಿ, ಭಾಗವಹಿಸಿದ್ದ ಗಣ್ಯರಾದ ನಿವೃತ್ತ ಕಾರ್ಯ ನಿರ್ವಾಹಕ ಅಧಿಕಾರಿ, ಶ್ರೀ ಜಯರಾಮ್ ರವರು ಮಾತನಾಡುತ್ತಾ ಯುವಕರು ಭಾರತೀಯ ಪರಂಪರೆಯಾದ ಯೋಗ ಮತ್ತು ವ್ಯಾಯಾಮಗಳನ್ನು ರೂಡಿಸಿಕೊಂಡು ಅರೋಗ್ಯಯುತ ಭಾರತವನ್ನು ಕಟ್ಟಲು ಸಹಕರಿಸಬೇಕಾಗಿ ಕರೆ ನೀಡಿದರು.
ನಂತರ, ರುಡ್ ಸೆಟ್ ಸಂಸ್ಥೆಯ ಪೂರ್ವ ನಿರ್ದೇಶಕ ಶ್ರೀ ಡಿ ಟಿ ರಾಮನುಜಮ್ ರವರು ಯುವಶಕ್ತಿ ಯನ್ನು ಕಟ್ಟಲು ರುಡ್ ಸೆಟ್ ಸಂಸ್ಥೆಯು ಸರ್ಕಾರದ ಆರ್ಥಿಕ ಸಹಾಯದ ಮೂಲಕ ಬೆಳೆದು ಬಂದ ದಾರಿಯನ್ನು ಮೆಲಕು ಹಾಕುತ್ತಾ.. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕಿಗಾಗಿ ಯುವಕರು ಮುಂದಾಗಬೇಕು ಆಗ ನಮ್ಮ ಸ್ವತಂತ್ರ ಭಾರತದ ಪ್ರಗತಿಗೆ ನಿಜವಾದ ಶಕ್ತಿ ಬರುತ್ತದೆ ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಯ ಪ್ರಸ್ತುತ ನಿರ್ದೇಶಕ ರಾದ ಶ್ರೀಮತಿ ಸರಿತಾ ಕೆ ಎಸ್ ರವರು ಅತಿಥಿಗಳ ಸ್ವಾಗತ ನೆರವೇರಿಸಿ ಪ್ರಸ್ತಾವಿಕ ನುಡಿಗಳನ್ನು ಮಂಡಿಸಿದರು.
ಶಿಬಿರಾರ್ಥಿಗಳು ದೇಶ ಭಕ್ತಿ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಉದ್ಯಮಿಗಳಾದ ಶ್ರೀ ದಯಾನಂದ ಸಾಗರ್, ಶ್ರೀ ರಾಮನಾಯಕ್, ಉಪನ್ಯಾಸಕರಾದ ಶ್ರೀ ಯೋಗೇಶ್ ಶಿರೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಶ್ರೀಮತಿ ಲತಾಮಣಿಯವರು ಕಾರ್ಯಕ್ರಮವನ್ನು ನಿರೂಪಣೆ ನಡೆಸಿಕೊಟ್ಟರು ಹಾಗು ವಂದನಾರ್ಪಣೆ ಯನ್ನು ಹಿರಿಯ ಉಪನ್ಯಾಸಕರಾದ ಶ್ರೀ ಪಾಲ್ ರಾಜ್ ರವರು ನಡೆಸಿಕೊಟ್ಟರು.