Friday, April 11, 2025
Google search engine

Homeರಾಜ್ಯಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ವಿಷ ಕುಡಿದ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ ಗ್ರಾಮಸ್ಥರು

ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ವಿಷ ಕುಡಿದ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ ಗ್ರಾಮಸ್ಥರು

ಹನೂರು: ವಿಷ ಕುಡಿದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಖಾಸಗಿ ವಾಹನದಲ್ಲಿ ರವಾನೆ ಮಾಡಿರುವ ಘಟನೆ ಶೆಟ್ಟಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶೆಟ್ಟಳ್ಳಿ ಗ್ರಾಮದ ಮಹಿಳೆ ರಾಜೇಶ್ವರಿ ಕೌಟುಂಬಿಕ ಕಲಹದಿಂದ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು.

ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆತನ ಸಂಬಂಧಿಕರು ಖಾಸಗಿ ವಾಹನದಲ್ಲಿ ಕರೆ ತಂದಾಗ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೆಚ್ಚಿನ ಚಿಕಿತ್ಸೆಗಾಗಿ  ತೆರಳಬೇಕಾದ ಸಂದರ್ಭದಲ್ಲಿ ತುರ್ತು ವಾಹನ  ಸಿಗದೇ ಕೆಲಕಾಲ ಪರದಾಡುವಂತಾಯಿತು.

ರಾಮಾಪುರ ಸಮುದಾಯ ಆರೋಗ್ಯ ಕೇಂದ್ರ ಸ್ಥಾನದಲ್ಲಿ ತುರ್ತು ವಾಹನವನ್ನು ಮಲೆ ಮಹದೇಶ್ವರ ಬೆಟ್ಟ ಕಳುಹಿಸಿದ್ದರಿಂದ ಸ್ಥಳೀಯರು ತುರ್ತು ಸಂದರ್ಭದಲ್ಲಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕಳುಹಿಸಿರುವ ತುರ್ತು ವಾಹನವನ್ನು ವಾಪಸ್ಸು ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು ಇಲ್ಲದಿದ್ದರೆ ಹೊಸ ತುರ್ತು ವಾಹನ ಬಿಡಲು ಕ್ಷೇತ್ರದ ಶಾಸಕರಾದ ಎಂ.ಆರ್ ಮಂಜುನಾಥ್ ಕ್ರಮವಹಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular