Monday, December 15, 2025
Google search engine

Homeರಾಜ್ಯಸುದ್ದಿಜಾಲಶರಣರ ವಚನಗಳೇ ಮಾನವ ಹಕ್ಕುಗಳ ಮೂಲ!

ಶರಣರ ವಚನಗಳೇ ಮಾನವ ಹಕ್ಕುಗಳ ಮೂಲ!

ವಿಜಯಪುರ : ಶರಣರ ವಚನಗಳೇ ಮಾನವ ಹಕ್ಕುಗಳ ಮೂಲ. ಆದರ್ಶ ಸಮಾಜದ ನಿರ್ಮಾಣದಲ್ಲಿ ಅವರು ನೀಡಿದ ಸಂದೇಶಗಳು ನಮ್ಮೆಲ್ಲರ ಜೀವನವನ್ನು ಬದಲಿಸುವ ದಿಕ್ಸೂಚಿಗಳಾಗಿವೆ ಎಂದು ವಿಜಯಪುರದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸನಗೌಡ ಪಾಟೀಲ ಹರನಾಳ ಅಭಿಪ್ರಾಯಪಟ್ಟರು.

ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ನೀಲಮ್ಮ ಮುತ್ತಪ್ಪ ಸಂಕಣ್ಣನವರ ದತ್ತಿ, ದಿ.ಪ್ರೊ.ತಿಪ್ಪಣ್ಣ ಕರೆಪ್ಪ ಕಲ್ಯಾಣಗೋಳ ದತ್ತಿ, ದಿ. ರಾಮಗೊಂಡಪ್ಪ ನಿಂಗಪ್ಪ ನಾಗಠಾಣ ದತ್ತಿ, ದಿ. ಗಂಗಾಧರ ಕೋರಳ್ಳಿ ದತ್ತಿ ಹಾಗೂ ದಿ. ನಾಗಪ್ಪ ರೇವಪ್ಪ ಶೇಠೆ ದತ್ತಿ ಎಂಬ ವಿವಿಧ ದತ್ತಿನಿಧಿ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಮನುಜ ಮತ ವಿಶ್ವಪಥ ಎಂಬುದನ್ನು ಅರಿತು ಜಾತ್ಯತೀತ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.

ನಂತರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎ. ಕಾಲೇಬಾಗ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಇಡೀ ಜಿಲ್ಲೆಯಾದ್ಯಂತ ಸಾಮರಸ್ಯ ಬೆಸೆಯುವ ಮಹೋನ್ನತ ಕಾರ್ಯ ಮಾಡುತ್ತಿದ್ದು, ನಾಡು ನುಡಿಯ ಗೌರವವನ್ನು ಹೆಚ್ಚಿಸಿದೆ ಎಂದರು. ಬಳಿಕ ಶರಣರು ಮಾನವ ಹಕ್ಕುಗಳ ಪ್ರತಿಪಾದಕರು ಹಾಗೂ ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ತಿಕೋಟಾ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಸಮಾಜದ ಸೂಕ್ಷ್ಮ ಸಂವೇದನೆಗಳನ್ನು ಇಂದು ನಾವೆಲ್ಲರೂ ಅರಿತುಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಶರಣ ಚಿಂತಕಿ ಚೈತನ್ಯ ಮುದ್ದೇಬಿಹಾಳ ಮಾತನಾಡಿ, ಅರಿವೇ ಗುರು ಎಂಬಂತೆ ಅಷ್ಠಾವರ್ಣಗಳು, ಪಂಚಾಚಾರಗಳು, ಷಟಸ್ಥಲಗಳು, ಶಿವಾಚಾರ, ಗಣಾಚಾರಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಮೂಲಕ ಬಸವಾದಿ ಶರಣರು ನೀಡಿದ ಸಂದೇಶಗಳನ್ನು ಮನಮುಟ್ಟುವಂತೆ ತಿಳಿಸಿಕೊಟ್ಟರು ಎಂದು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಶಿಧರ ಸಂಕಣ್ಣನವರ, ಭಾಗೀರಥಿ ಸಿಂಧೆ, ಆಶಾ ಬಿರಾದಾರ, ಶಶಿಕಲಾ ಬಿರಾದಾರ ಮುಂತಾದವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಾದ ರಾಷ್ಟ್ರ ಮಟ್ಟದ ಐ.ಎಂ.ಎ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ ಕಾಗಲಕರರೆಡ್ಡಿ ಹಾಗೂ ಪತ್ರಿಕಾ ಮಾಧ್ಯಮದ ಮುದ್ದೇಬಿಹಾಳ ತಾಲೂಕು ನೂತನ ಅಧ್ಯಕ್ಷ ಡಿ.ಬಿ.ವಡವಡಗಿ, ಇಂಡಿ ತಾಲೂಕು ಅಬುಶಾಮ ಹವಾಲ್ದಾರ, ತಾಳಿಕೋಟೆ ತಾಲೂಕು ಮೈಬೂಬಸುಬಾನಿ ಶಿರಸಗಿ, ನಿಡಗುಂದಿ ತಾಲೂಕು ಬಸವರಾಜ ಹೆರಕಲ್, ತಿಕೋಟಾ ತಾಲೂಕು ಸಾತಲಿಂಗಯ್ಯ ಸಾಲಿಮಠ, ಚಡಚಣ ತಾಲೂಕು ರಮೇಶ ಬಿರಾದಾರ, ಕೊಲ್ಹಾರ ತಾಲೂಕ ಅರುಣಕುಮಾರ ಔರಸಂಗ, ಆಲಮೇಲ ಅವಧೂತ, ಬಂಡಗಾರ ಸೇರಿದಂತೆ ಮುಂತಾದ ಪದಾಧಿಕಾರಿಗಳನ್ನು ಜಿಲ್ಲಾ ಕಸಾಪ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೆ.ಎಸ್.ಹಣಮಾಣಿ, ಬಿ.ಎಂ.ಆಜೂರ, ಶ್ರೀಕಾಂತ ನಾಡಗೌಡ, ಮಹಾದೇವಪ್ಪ ಮೋಪಗಾರ, ರಾಜೇಶ್ವರಿ ಮೋಪಗಾರ, ಸುಖದೇವಿ ಅಲಬಾಳಮಠ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಜಿ.ಎಸ್.ಬಳ್ಳೂರ, ರಿಯಾಜ್ ಪಿಂಜಾರ, ಎಂ.ಎನ್.ನಿಂಬಾಳ, ಶಾಂತಾ ಜೋಶಿ, ಡಾ.ಚಿರಂಜೀವಿ, ಡಾ. ಪ್ರಶಾಂತ ಬಾಬಾನಗರ, ಮಲ್ಲಿಕಾರ್ಜುನ ಕೆಳಗಡೆ, ಪೀರಾಸಾಹೇಬ ವಾಲಿಕಾರ, ಅಹ್ಮದ ವಾಲಿಕಾರ, ರಾಜಶ್ರೀ ವೊಪಗಾರ, ರಾಜಶೇಖರ ಡೋಣಜಮಠ, ಪರಶುರಾಮ ಚಲವಾದಿ, ಡಾ. ಜಾಫರ್ ಸಾಧೀಕ್, ಸಿದ್ದು ಬೀಳಗಿ, ಡಾ ಚಿರಂಜೀವಿ ಬಂಗಾ, ಮಹಾದೇವ ಮೋಪಗಾರ, ಶ್ರೀಕಾಂತ ನಾಡಗೌಡ, ಎಂ.ಎ. ವಾಲೀಕಾರ. ಉಮೇಶ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular