ಪಿರಿಯಾಪಟ್ಟಣ: ತಾಲೂಕಿನ ಕಕ್ಕುಂಡಿ ಗ್ರಾಮದಲ್ಲಿ ಶುಕ್ರವಾರ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ ಕುಸಿದು ಬೀಳುತ್ತಿದ್ದ ವೇಳೆ ತನ್ನ ಎರಡು ವರ್ಷದ ಮಗುವನ್ನು ಕಾಪಾಡಿ, ತಾಯಿ ಗೋಡೆಯಡಿ ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ತಾಲ್ಲೂಕು ಕಚೇರಿ ಗ್ರಾಮ ಸೇವಕ ಶಿವರಾಜು ಅವರ ಪತ್ನಿ ಹೇಮಲತಾ(೨೨) ಮೃತರು. ಹೇಮಲತಾ ಮನೆಯ ಹೊರಗಿದ್ದ ಶೌಚಾಲಯಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಮನೆಯೊಳಗೆ ಬರುವಾಗ ಗೋಡೆ ಕುಸಿಯುತ್ತಿರುವುದನ್ನು ಗಮನಿಸಿದ್ದಾರೆ. ಆಗ, ಜತೆಗಿದ್ದ ಮಗುವನ್ನು ದೂರಕ್ಕೆ ತಳ್ಳಿದ್ದಾರೆ. ಇದರಿಂದ ಮಗು (ಕೃಷಾಂತ್) ಪ್ರಾಣಾಪಾಯದಿಂದ ಪಾರಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ತಹಸೀಲ್ದಾರ್ ಕುಂಞ ಅಹಮ್ಮದ್, ಉಪ ತಹಸೀಲ್ದಾರ್ ಶುಭ ಮತ್ತು ಕಂದಾಯ ನಿರೀಕ್ಷಕ ಶ್ರೀಧರ್ ಭೇಟಿ ನೀಡಿದ್ದರು.