ಮಂಗಳೂರು(ದಕ್ಷಿಣ ಕನ್ನಡ): ಸದೃಢ ಭಾರತ ಕಟ್ಟುವ ಕೆಲಸ ಮಂಗಳೂರಿನಿಂದ ಆರಂಭ ಎಂದು ಮಂಗಳೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಹೇಳಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮಾತನಾಡಿ, ಬಿಜೆಪಿ ಸಂಸದರು ಉತ್ತಮ ಕೆಲಸ ಮಾಡಿದಿದ್ರೆ ಅವರ ಅಭ್ಯರ್ಥಿ ಬದಲಾಗುವುದು ಏಕೆ..? ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ಸಾಮರಸ್ಯದ, ಅಭಿವೃದ್ಧಿಯ ರಾಜಕೀಯ ಮಾಡಲು ಬಂದಿದ್ದೇನೆ. ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು, ಕೈಗಾರಿಕೆಗಳು ಬರಬೇಕು ಎಂದಿದ್ದಾರೆ.
ಭಾರತವನ್ನು ವಿಶ್ವ ಗುರು ನಾವು ಮಾಡುತ್ತೇವೆ. ಗ್ಯಾರಂಟಿಯ ಲಾಭ ಪಡೆದವರು ಕಾಂಗ್ರೆಸ್ಸನ್ನ ಕೈ ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ತಿಳಿಸಿದರು.