Thursday, February 12, 2026
Google search engine

Homeರಾಜ್ಯಸುದ್ದಿಜಾಲಕಸ ಮುಕ್ತ ಪರಿಸರ ಮಾಡುವಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ : ಶಾಸಕ ಎ.ಆರ್.ಕೃಷ್ಣಮೂರ್ತಿ

ಕಸ ಮುಕ್ತ ಪರಿಸರ ಮಾಡುವಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ : ಶಾಸಕ ಎ.ಆರ್.ಕೃಷ್ಣಮೂರ್ತಿ

ಕೊಳ್ಳೇಗಾಲ : ಸಮಾಜದಲ್ಲಿ ಕೊಳಕು, ಕಸದಿಂದ ಮುಕ್ತ ಪರಿಸರವನ್ನು ನಿರ್ಮಾಣ ಮಾಡುವುದರಲ್ಲಿ ನಮ್ಮ ಪೌರಕಾರ್ಮಿಕರು ಮುಖ್ಯ ಕಾರಣ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿ ಡಿ.ಎಸ್. ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಬಡಾವಣಿಯಲ್ಲಿ ರಸ್ತೆ ಅಗಲಿಕರಣ ಮಾಡಿದ್ದೇನೆ, ಇತರೆ ಜನಾಂಗದವರಂತೆ ಇವರು ಕೂಡ ವಿದ್ಯಾವಂತರಾಗಿ, ಸ್ವಾವಲಂಬಿಯಾಗಿ ಉತ್ತಮ ಜೀವನ ನಡೆಸುವಂತಾಗಬೇಕು ಎಂದರು.

ಅಲ್ಲದೆ ಗ್ರಾಮ, ಪಟ್ಟಣ,ನಗರ, ಜಿಲ್ಲೆಗಳನ್ನು ಸ್ವಚ್ಛವಾಗಿಡಲು ಸಹಕಾರಿಯಾಗಿದ್ದಾರೆ ಬೆಳಗಿನ ಸೂರ್ಯ ಉದಯಿಸುವ ಮೊದಲೇ ಇಡೀ ನಗರ ಪ್ರದೇಶವನ್ನು ಸ್ವಚ್ಛವಾಗಿರಿಸಿ ನಮ್ಮಗಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿ, ಇಂದಿನ ಸಮಾಜದಲ್ಲಿ ಕಸದಿಂದ ಮುಕ್ತ ಪರಿಸರವನ್ನು ನಿರ್ಮಾಣ ಮಾಡುವುದರಲ್ಲಿ ನಮ್ಮ ಪೌರಕಾರ್ಮಿಕರ ಪಾತ್ರ ಮುಖ್ಯ ಕಾರಣವಾಗಿದೆ. ಕರ್ನಾಟಕದಲ್ಲಿ ಇವತ್ತು ಮೈಸೂರು ಸಿಟಿ ನಂಬರ್.1 ಸ್ವಚ್ಛತಾ ನಗರ ಪ್ರದೇಶವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣಕರ್ತರು ನಮ್ಮ ಪೌರಕಾರ್ಮಿಕರು, ಸುತ್ತ, ಮುತ್ತಲಿನ ಪ್ರದೇಶವನ್ನು ಶುಚಿಯಾಗಿಡುವ ಜೊತೆಗೆ ನಮ್ಮಗಳಿಗೆ ಉತ್ತಮ ಗಾಳಿ,ಪರಿಸರ, ಆರೋಗ್ಯದಿಂದ ಜೀವನ ನಡೆಸಲು ಸಹಕಾರಿಯಾಗಿದ್ದಾರೆ, ಇವರಿಗೆ ನಾವು ಎಷ್ಠೆ ಕೃತಜ್ಞತೆ ಸಲ್ಲಿಸಿದರೂ ಸಾಲದೂ,ಉತ್ತಮ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಅವರ ತ್ಯಾಗ, ಶ್ರಮ, ಬಹಳ ದೊಡ್ಡದು ನಾವೆಲ್ಲರೂ ಅವರನ್ನು ಗೌರವದಿಂದ ನಮ್ಮ ತಾಯಿಯಂತೆ ಕಾಣಬೇಕು ಎಂದರು.

ಮುಂದುವರೆದು, ಮೈಸೂರು ಜಿಲ್ಲೆ ಮಹಾಪೌರರು ನಾರಾಯಣ ರಾಜ್ಯ ಅಧ್ಯಕ್ಷರು ನಿಮ್ಮೆಲ್ಲರ ಧ್ವನಿಯಾಗಿದ್ದಾರೆ, ರಾಜ್ಯದಲ್ಲಿ 12,692 ಜನರು ಪೌರ ಕಾರ್ಮಿಕರು ಖಾಯಂ ಆಗಿದ್ದಾರೆ ಇದಕ್ಕೆ ಮುಖ್ಯ ಕಾರಣ ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು. ರಾಜ್ಯದಲ್ಲಿ ಕೃಷಿ ಮಾಡುವ ರೈತ ಎಷ್ಟು ಮುಖ್ಯನೂ, ದೇಶ ಕಾಯೋ ಸೈನಿಕರು ಎಷ್ಟು ಮುಖ್ಯನೊ, ಅದೇ ರೀತಿ ನಮ್ಮ ಸಮಾಜವನ್ನು ಶುಚಿ ಯಾಗಿಡುವ ಪೌರಕಾರ್ಮಿಕರು ಕೂಡ ನಮಗೆ ಬಹಳ ಮುಖ್ಯ. ಕೊಳ್ಳೇಗಾಲ ನಗರಸಭೆಯಲ್ಲಿ 36 ಜನರು ಖಾಯಂ ನೌಕರರು,23 ಜನರು ನೇರನೇಮಕಾತಿ, 22 ಜನರು ಇತರೆ ವಾಚರ್, ಸೂಪರ್ ಸ್ಟಾರ್‌ ಆಗಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟು 81ಜನರಿದ್ದು ಇವರೆಲ್ಲರಿಗೂ ಆರೋಗ್ಯ ವಿಮೆ, 5ರಿಂದ 10 ಲಕ್ಷದವರೆಗೂ ಉಚಿತ ಚಿಕಿತ್ಸೆ ಇರುತ್ತದೆ. ಇದಲ್ಲದೆ ಒಂದು ತಿಂಗಳು ಹೆಚ್ಚುವರಿ ವೇತನವನ್ನು ನಮ್ಮ ಸರ್ಕಾರ ನೀಡುತ್ತದೆ.ಆರ್ಮುಗಂ, ಗಣೇಶ, ರಮೇಶ, ಶಿವಕುಮಾರ್, ಶರವಣ, ಸುಬ್ಬಯ್ಯ, ಸತ್ಯ, ಒಟ್ಟು 7 ಜನರು ಇವತ್ತು ಖಾಯಂ ನೌಕರರಾಗಿದ್ದಾರೆ. ಅನೇಕ ಕಡೆ ಬೆಂಗಳೂರಿನಲ್ಲಿ ನಿರುದ್ಯೋಗದ ಸಮಸ್ಯೆಯಿಂದ ಬೇರೆ ಸಮುದಾಯದ ಜನರು ಬೀದಿ ಸ್ವಚ್ಛತಾ ಕಾರ್ಯಕ್ಕೆ ಪೌರಕಾಮಿ9ಕರ ಕೆಲಸ ಮಾಡಲು ಬರುತ್ತಿದ್ದಾರೆ, ನಿಮ್ಮ ಹುದ್ದೆಗೆ ತುಂಬಾ ಮಹತ್ವ ಇದೆ. ಹಾಗಾಗಿ ನಿಮಗೆ ಗೌರವಯುತವಾಗಿ ಉತ್ತಮ ಬದುಕನ್ನು ಕಲ್ಪಿಸಿಕೊಳ್ಳಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೆಬ್ರು ಹಣಕಾಸಿನ ಸಚಿವರಾಗಿ ನಿಮ್ಮ ಪರವಾಗಿ ಸ್ಪಂದಿಸಿದ್ದಾರೆ. ನಾನೂ ಕೂಡ ನಿಮ್ಮ ಪರವಾಗಿರುತ್ತೇನೆ ಎಂದು ಶಾಸಕರು ತಿಳಿಸಿದರು.

ಇದೇ ವೇಳೆ ಪೌರಕಾರ್ಮಿಕರಿಗೆ ಸ್ವತಃ ಊಟ ಬಡಿಸುವುದರ ಜೊತೆಗೆ ತಾವೂ ಕೂಡ ಭಾಗಿಯಾಗಿದ್ದರು. ಉತ್ತಮವಾಗಿ ಸೇವೆ ಸಲ್ಲಿಸಿದ ಪೌರಕಾರ್ಮಿಕರಿಗೆ, ನಿವೃತ್ತ ನೀರುಗಂಟಿ, ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಕೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿದ್ದ ಪೌರ ಕಾರ್ಮಿಕರಿಗೆ ಬಹುಮಾನವನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಪೌರಯುಕ್ತರು ರುದ್ರಮ್ಮ ಶರಣಯ್ಯ, ತಾ.ಪಂ.ಇಒ ಗುರುಶಾಂತಪ್ಪ ಬೆಳ್ಳುಂಡಗಿ, ನಗರಸಭೆ ಮಾಜಿ ಅಧ್ಯಕ್ಷ ರೇಖಾ ರಮೇಶ್, ನಗರಸಭೆಯ ಮಾಜಿ ಸದಸ್ಯರುಗಳು, ಪೌರಕಾರ್ಮಿಕರ ಸಂಘದ ರಾಜಣ್ಣ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular