Thursday, April 3, 2025
Google search engine

Homeಅಪರಾಧಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ, ಆತನ ಸಹೋದರನ ಕೊಲೆಗೈದ ಯುವತಿ ತಂದೆ

ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ, ಆತನ ಸಹೋದರನ ಕೊಲೆಗೈದ ಯುವತಿ ತಂದೆ

ಬೆಳಗಾವಿ: ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಮತ್ತು ಆತನ ಸಹೋದರನನ್ನು ಯುವತಿಯ ತಂದೆ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ.

ಯಲ್ಲಪ್ಪ ಹಳೇಗೋಡಿ (22), ಮಾಯಪ್ಪ (20) ಕೊಲೆಯಾದ ಯುವಕರು. ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಕೊಲೆ ಆರೋಪಿ.

ಫಕೀರಪ್ಪನ‌ ಪುತ್ರಿಯನ್ನು ಪ್ರೀತಿಸುವಂತೆ ಯಲ್ಲಪ್ಪ ಬೆನ್ನುಬಿದ್ದಿದ್ದನು. ಈ ವಿಚಾರ ತಿಳಿದ ಫಕೀರಪ್ಪ “ನನ್ನ ಪುತ್ರಿಯ ತಂಟೆಗೆ ಬರಬೇಡ” ಅಂತ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಯಲ್ಲಪ್ಪನಿಗೆ ಫಕೀರಪ್ಪ ಚಾಕುವಿನಿಂದ ಇರಿದಿದ್ದಾನೆ.

ಜಗಳ ಬಿಡಿಸಲು ಬಂದಿದ್ದ ಮಾಯಪ್ಪನಿಗೂ ಫಕೀರಪ್ಪ ಚಾಕು ‌ಇರಿದಿದ್ದಾನೆ. ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ‌ಮಾಯಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆರೋಪಿ ಫಕೀರಪ್ಪ ಭಾಂವಿಹಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ‌ರಾಮದುರ್ಗ ಡಿವೈಎಸ್‌ ಪಿ ಭೇಟಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular