Saturday, July 4, 2026
Google search engine

Homeಅಪರಾಧಶೂಟಿಂಗ್ ವೇಳೆ ನಟನ ಮನೆಯಲ್ಲಿ ಕಳ್ಳತನ : ನಟಿಸಲು ಬಂದ ಯುವಕ ಬಂಧನ

ಶೂಟಿಂಗ್ ವೇಳೆ ನಟನ ಮನೆಯಲ್ಲಿ ಕಳ್ಳತನ : ನಟಿಸಲು ಬಂದ ಯುವಕ ಬಂಧನ

ಬೆಂಗಳೂರು : ಶಾರ್ಟ್ ಮೂವಿಯಲ್ಲಿ ನಟಿಸುವ ಅವಕಾಶದ ನೆಪದಲ್ಲಿ ಸಿನಿಮಾ ನಟನ ಮನೆಗೆ ಬಂದಿದ್ದ ಯುವಕ, ಶೂಟಿಂಗ್ ವೇಳೆ ಚಿನ್ನದ ಸರ ಕಳವು ಮಾಡಿರುವ ಆರೋಪದ ಮೇಲೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಫ್ಲಾಟ್ F01’ ಶಾರ್ಟ್ ಮೂವಿಯನ್ನು ನಟ ಹಾಗೂ ನಿರ್ದೇಶಕ ಲಿಖಿತ್ ರಾಜ್ ನಿರ್ದೇಶಿಸುತ್ತಿದ್ದು, ಅದರ ಚಿತ್ರೀಕರಣ ಸಹಕಾರನಗರದಲ್ಲಿರುವ ಅವರ ನಿವಾಸದಲ್ಲಿ ಕಳೆದ ಜೂನ್ 28ರಿಂದ ನಡೆಯುತ್ತಿತ್ತು. ಇದೇ ವೇಳೆ ಲಿಖಿತ್ ರಾಜ್ ಅವರ ಮನೆಯಲ್ಲಿ ದೇವರ ಕೋಣೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು. ಈ ಘಟನೆ ಸಂಬಂಧ ಲಿಖಿತ್ ರಾಜ್ ಅವರ ತಾಯಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅಭಿಷೇಕ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೂ ಪ್ರಾಥಮಿಕ ತನಿಖೆಯಲ್ಲಿ, ಶಾರ್ಟ್ ಮೂವಿಯಲ್ಲಿ ಅಭಿನಯಿಸಲು ಅವಕಾಶ ಪಡೆದಿದ್ದ ಅಭಿಷೇಕ್ ಕಳವು ನಡೆಸಿರುವ ಆರೋಪ ಕೇಳಿಬಂದಿದ್ದು, ಬಂಧಿತನಿಂದ ಸುಮಾರು ₹1.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೇಹಳ್ಳಿ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular