ಧಾರವಾಡ: ನಗರದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರತಿಮಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.
ಪಿ.ಎಸ್. ಮಠದ ಎಂಬುವವರ ಫ್ಲ್ಯಾಟ್ ನಲ್ಲಿ ಕಳ್ಳತನವಾಗಿದ್ದು, ಮನೆಯವರು ಊರಿಗೆ ಹೋಗಿದ್ದಾಗ ಕಳ್ಳತನವಾಗಿದೆ.
ಬಾಗಿಲ ಕೀಲಿ ಮುರಿದ ಇಬ್ಬರು ಕಳ್ಳರು ಮನೆಯಲ್ಲಿದ್ದ ಸುಮಾರು 80 ಗ್ರಾಂ ಚಿನ್ನ ಕಳ್ಳತನ ಮಾಡಿದ್ದಾರೆ.
ಮನೆಯ ಆವರಣದಲ್ಲಿರುವ ಸಿಸಿ ಕ್ಯಾಮೆರಾವನ್ನು ಸಿಸಿ ಕ್ಯಾಮೆರಾ ಪಕ್ಕಕ್ಕೆ ಹೊರಳಿಸಿದ ಕಳ್ಳರುಬಳಿಕ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.