ಮೈಸೂರು : ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮ್ಯಾಗ್ನಟೆಕ್ ಫಾಕ್ಟರಿಯಲ್ಲಿ ಕಳವು ಮಾಡಿದ್ದ ೭ ಲಕ್ಷ ರೂ ಮೌಲ್ಯದ ೬೦೬ ಕೆಜಿ ತಾಮ್ರದ ವೈರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ೭ ಜನರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಳವು ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ ೧೬ ರಂದು ದೂರು ದಾಖಲಾಗಿತ್ತು. ಕಳವು ಮಾಲು ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿದ ಪೊಲೀಸರು ಅಕ್ಟೋಬರ್ ೨೬ ರಂದು ಮೂವರನ್ನು ೨೯ ರಂದು ಇನ್ನೂ ಮೂವರನ್ನು ಮತ್ತು ಡಿ,೧೪ ರಂದು ಒಬ್ಬ ಆರೋಪಿ ಸೇರಿದಂತೆ ಒಟ್ಟು ೭ ಜನರನ್ನು ಬಂಧಿಸಿ ತನಿಖೆ ಕೈಗೊಂಡು ಅವರು ಕಳುವು ಮಾಡಿದ ೭ ಲಕ್ಷ ರೂ ಮೌಲ್ಯದ ೬೦೬ ಕೆ.ಜಿ ತೂಕದ ತಾಮ್ರದ ವೈರ್ ಮತ್ತು ಕಳುವು ಮಾಡಲು ಬಳಸಿದ ಟಾಟಾ ಸುಮೋ ವಾಹನವನ್ನು ವಶಕ್ಕೆ ಪಡೆದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸುರೇಶ್‌ಕುಮಾರ್, ಪಿಎಸ್‌ಐ ವಿಶ್ವನಾಥ, ನಾರಾಯಣ್, ಕೃಷ್ಣ, ಸಿಬ್ಬಂದಿಗಳಾದ ಶಂಕರ್, ಪ್ರದೀಪ್ ಕುಮಾರ್, ಪರಮೇಶ, ಲೋಕೇಶ್, ಲೋಕೇಶ್ ಹೆಚ್.ಎಸ್, ಮಂಜುನಾಥ್, ವೆಂಕಟೇಶ್, ಪರಮೇಶ್, ಶಿವಕುಮಾರ್, ಅಜ್ರಾ, ರಂಜಿತಾ, ತಾಂತ್ರಿಕ ಸಿಬ್ಬಂದಿಗಳಾದ ಕುಮಾರ್, ಮಂಜು, ಶ್ಯಾಮ್ ತನಿಖೆಯಲ್ಲಿ ಭಾಗವಹಿಸಿದ್ದರು.