Monday, April 21, 2025
Google search engine

Homeಅಪರಾಧಮನೆ ಬೀಗ ಮುರಿದು ಕಳ್ಳತನ: ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿ

ಮನೆ ಬೀಗ ಮುರಿದು ಕಳ್ಳತನ: ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಲಕ್ಷತಾಂತರ ನಗದು ಮತ್ತು ಚಿನ್ನ ದೊಚಿ ಪರಾರಿಯಾಗಿರುವು ಘಟನೆ ಕೆ.ಆರ್.ನಗರ ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ನಡೆದಿದೆ.

ಪಟ್ಟಣದ ಮುಸ್ಲಿಂ ಬಡಾವಣೆಯ ವಾರ್ಡ್ ನಂ ೨೧ರಲ್ಲಿ ಸಹವರ್ದಿ ಮದರಿ ಆಸ್ತಾನೆ ಗುರುಗಳಾದ ಅಫ್ಸರ್ ಪಾಷ(ಮುನವಾರ್ ಷಾ) ಅವರ ಮತ್ತು ಪತ್ನಿಯ ೬೦೦ಗ್ರಾಂ ಚಿನ್ನ ಹಾಗೂ ೨೫ಲಕ್ಷ ನಗದು ಹಣವನ್ನು ಕಳ್ಳರು ದೊಚಿ ಪರಾರಿಯಾಗಿದ್ದಾರೆ. ಗುರುಗಳು ಬೆಂಗಳೂರಿಗೆ ಹೋಗಿದ್ದ ಸಂದರ್ಭ ನೋಡಿಕೊಂಡು ಮೇ ೭ ಮಧ್ಯ ರಾತ್ರಿ ಮನೆಗೆ ನುಗ್ಗಿದ ಕಳ್ಳರು ತಮ್ಮ ಚಾಣಕ್ಷತೆಯಿಂದ ನಕಲಿ ಕೀಗಳ ಮೂಲಕ ಬೀಗ ತೆಗೆದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ೨೫ಲಕ್ಷ ರೂಗಳು ಮತ್ತು ಗುರುಗಳು ಹಾಗೂ ಪತ್ನಿಯ ಒಡವೆಗಳನ್ನ ಕಳ್ಳತನ ಮಾಡಿಕೊಂಡು ಹೋರಗೆ ಬಂದ ಕಳ್ಳ ಮತ್ತೊಬ್ಬನಿಗೆ ಕಳ್ಳತನ ಮಾಡಿದ್ದ ಬ್ಯಾಗನ್ನು ನೀಡಿ ಮತ್ತೆ ವಾಪಸ್ಸ್ ಬಂದು ಯತಾಸ್ಥಿತಿ ಬೀಗವನ್ನ ಲಾಕ್ ಮಾಡಿದ್ದಾರೆ ಸಂಭಂದಿಸಿದಂತೆ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ದೃಷ್ಯಗಳು ಸೇರೆಯಾಗಿದೆ.

ಮೇ ೭ ಮಧ್ಯ ರಾತ್ರಿ ಮನೆಗೆ ನುಗ್ಗಿದ ಕಳ್ಳತನ ಮಾಡಿರುವುದನ್ನು ಮೇ ೮ರ ಬೆಳಿಗ್ಗೆ ಅವರ ಪತ್ನಿ ಗಾಬರಿಗೊಂಡು ಕೊಡಲೇ ಬೆಂಗಳೂರಿಗೆ ಹೋಗಿದ್ದ ಗುರುಗಳಿಗೆ ದೂರವಾಣಿ ಮೂಲಕ ತಿಳಿಸುತ್ತಾರೆ ಕೊಡಲೆ ಆಗಮಿಸಿದ ಅವರು ಈ ಘಟನೆ ಸಂಬಂದ ಕೆ.ಆರ್.ನಗರ ಪೊಲೀಸ್ ಠಾಣೆಗೆ ಮೇ ೮ರಂದು ದೂರು ನೀಡುತ್ತಾರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮತ್ತು ಅಕ್ಕಪಕ್ಕದಲ್ಲಿದ್ದ ಸಿಸಿಟಿವಿ ದೃಷ್ಯಗಳನ್ನ
ಪರೀಶಿಸುತ್ತಾರೆ ಒಬ್ಬ ವ್ಯಕ್ತಿ ಬುರ್ಖಾ ಧರಿಸಿ ಮನೆ ನುಗ್ಗಿ ಕಳ್ಳತನ ಮಾಡಿರುವುದು ಹಣ ಮತ್ತು ಚಿನ್ನ ಬ್ಯಾಗಿನಲ್ಲಿ ತುಂಬಿಕೊಂಡು ಮಧ್ಯ ರಾತ್ರಿ ೧:೩೦ರಲ್ಲಿ ಹೋರಗಡೆ ಹೋಗುತ್ತಿರುವ ದೃಷ್ಯ ಪತ್ತೆಯಾಗುತ್ತಿದೆ ಈ ಸಂಬಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನ ಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಚಿನ್ನ ಮತ್ತು ಹಣ ಕಳೆದುಕೊಂಡ ಅಫ್ಸರ್ ಪಾಷ(ಮುನವಾರ್ ಷಾ) ಅವರನ್ನ ಯಾರ ಮೇಲಾದರು ಅನುಮಾನ ಇದೆಯೇ ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಅಫ್ಜಲ್ ಮತ್ತು ಸಂತೋಷ್ ಎಂಬ ಇಬ್ಬರ ಮೇಲೆ ಅನುಮಾನವಿದೆ ಎಂದು ತಿಳಿಸಿದ್ದು ಕಳ್ಳರ ಬಗ್ಗೆ ಒಂದಿಷ್ಟು ಸುಳಿವು ಸಿಕ್ಕಾಂತ್ತಾಗಿದೆ ಇದರಿಂದ ಪೊಲೀಸರು ಕಳ್ಳರ ಬೆನ್ನತ್ತಿದ್ದಾರೆ.

RELATED ARTICLES
- Advertisment -
Google search engine

Most Popular