ಕೃಷ್ಣರಾಜಪೇಟೆ: ಪಟ್ಟಣದ ಟಿ ಬಿ ಸರ್ಕಲ್ ಸಮೀಪವಿರುವ ಹೊಸಹೊಳಲು ರಸ್ತೆಯಲ್ಲಿರುವ ಫೆಡ್ ಬ್ಯಾಂಕ್ ಹಾಗೂ ಲಕ್ಷ್ಮಿ ಲಿಕ್ಕರ್ ಸ್ಟೋರ್ ಪಕ್ಕದಲ್ಲಿರುವ ಶ್ರೀ ಲೀಲಾ ಬ್ಯಾಂಕರ್ಸ್ ಮತ್ತು ಜ್ಯೂಯಲರ್ಸ್ ಚಿನ್ನದ ಅಂಗಡಿಯಲ್ಲಿ ಕಳ್ಳರು ರಾತ್ರಿಯ ಸಮಯದಲ್ಲಿ ಅಂಗಡಿ ಗೋಡೆಯ ಹಿಂಭಾಗದಲ್ಲಿ ಗ್ಯಾಸ್ ಕಟರ್ ನಿಂದ ಕೊರೆದು ಲಕ್ಷಾಂತರ ಮೌಲ್ಯವುಳ್ಳ ಚಿನ್ನ,ಬೆಳ್ಳಿ ಇತರೆ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಪಟ್ಟಣ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್,ಸಬ್ ಇನ್ಸ್‌ಪೆಕ್ಟರ್ ಸುನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಕಳ್ಳತನ ಹೆಚ್ಚುತ್ತಿವೆ.ಅಕ್ಕಪಕ್ಕದ ಸಿಸಿ ಕ್ಯಾಮರಾ ಪರಿಶೀಲಿಸಿ ಆದಷ್ಟು ಬೇಗ ಕಳ್ಳರನ್ನೂ ಪತ್ತೆ ಹಚ್ಚುತ್ತೇವೆ ಎಂದು ಭರವಸೆ ನೀಡಿದರು.