ಮೈಸೂರು : ಇಲ್ಲಿನ ಎನ್‌ಆರ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ೩.೬೦ ಲಕ್ಷ ರೂ ಮೌಲ್ಯದ ತಾಮ್ರದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಎನ್‌ಆರ್ ಠಾಣೆ ವ್ಯಾಪ್ತಿಯ ಶ್ರೀ ಬೀರೇಶ್ವರ ಎಂಟರ್ ಪ್ರೈಸಸ್ ಹಿತ್ತಾಳೆ ಮತ್ತು ತಾಮ್ರದ ಸ್ಕ್ಯಾಪ್ ಐಟಂಗಳ ಗುಜರಿಯಲ್ಲಿ ಕಳೆದ ಡಿಸೆಂಬರ್, ೨೬ ರಂದು ರಾತ್ರಿ ತಾಮ್ರದ ಸ್ಟ್ಯಾಪ್ ಐಟಂಗಳು, ಕ್ಯಾಷ್ ಬಾಕ್ಸ್‌ನಲ್ಲಿಟ್ಟಿದ್ದ ನಗದು ಹಣ ಕಳ್ಳತನವಾಗಿರುವ ಬಗ್ಗೆ ನರಸಿಂಹರಾಜ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ನರಸಿಂಹರಾಜ ಪೊಲೀಸರು ಜ,೩ ಮತ್ತು ೪ ರಂದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬಯಲಿಗೆ ಬಂದಿದೆ. ಆರೋಪಿಗಳಿಂದ ೩.೬೦ ಲಕ್ಷ ರೂ. ಮೌಲ್ಯದ ೫೫೮ ಕೆ.ಜಿ. ತೂಕದ ತಾಮ್ರದ ಸ್ಟ್ಯಾಪ್ ಐಟಂಗಳನ್ನು ಪೊಲೀಸರು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಡಿಸಿಪಿ ಎಸ್. ಜಾಹ್ನವಿ, ಎಸಿಪಿ ಅಶ್ವಥ್‌ನಾರಾಯಣ್ ಮಾರ್ಗದರ್ಶನದಲ್ಲಿ ಎನ್‌ಆರ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಕೆ. ತಳವಾರ್, ಪಿಎಸ್‌ಐ ಗಣೇಶ ಎಸ್.ಕೆ., ಸಿಬ್ಬಂದಿಗಳಾದ ಆದಂ.ಟಿ.ಎಂ, ಮೋಹನ್ ಕುಮಾರ್
ಎಂ, ಸುನೀಲ್ ಕುಮಾರ್ ಸಿ, ದೊಡ್ಡಗೌಡ ಡಿ.ಎಸ್, ಈರೇಶ.ಕೆ, ಬಸವರಾಜು ಸಿ., ಮತ್ತು ಪರಶುರಾಮ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.