ಬೆಂಗಳೂರು: ಕಲ್ಲುಸಕ್ಕರೆಯು ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ಪೌಷ್ಟಿಕಯುತವಾಗಿದೆ. ಇದು ವಿಶಿಷ್ಟವಾದ ಪರಿಮಳ ಹಾಗು ರುಚಿಯನ್ನು ಹೊಂದಿದೆ. ಅಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಪ್ರಯೋಜಗಳು ಇಂತಿವೆ.
ಸಾಮಾನ್ಯ ಸಕ್ಕರೆಗಿಂತ ಮಾಧುರ್ಯವನ್ನು ಹೊಂದಿರುವ ಕಲ್ಲುಸಕ್ಕರೆ ಜೀರ್ಣಿಸಿಕೊಳ್ಳಲು ಸುಲಭವಾದುದಾಗಿದೆ. ಇದನ್ನು ಹೆಚ್ಚಿನ ಭಾರತೀಯರು ಆಹಾರದ ನಂತರ ಇದನ್ನು ಸೇವಿಸುತ್ತಾರೆ. ಇದೊಂದು ಉತ್ತಮ ಮೌತ್ ಫ್ರೆಶನರ್ ಆಗಿದೆ. ಆಮ್ಲೀಯತೆಯಿಂದ ಉಂಟಾಗುವ ವಾಕರಿಕೆ ನಿವಾರಿಸಲು ಇದು ಸಹಾಯ ಮಾಡುತ್ತದೆ.
ವಿವಿಧ ಖನಿಜಗಳು, ವಿಟಮಿನ್ ಗಳು ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿರುವ ಕಲ್ಲು ಸಕ್ಕರೆಯ ನಿಯಮಿತ ಬಳಕೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ದೇಹದ ತಾಪಮಾನ ಹೆಚ್ಚಾದಾಗ ಕಲ್ಲುಸಕ್ಕರೆಯ ನೀರನ್ನು ಕುಡಿಯುವುದು ಉತ್ತಮ. ಇದು ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯವಾದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಖನಿಜಗಳನ್ನು ಇದು ಹೊಂದಿದೆ. ಸಾಮಾನ್ಯವಾಗಿ ನೈಸರ್ಗಿಕ ಕೆಮ್ಮು ಪರಿಹಾರವಾಗಿ ಆಯುರ್ವೇದ ಔಷಧದಲ್ಲಿ ಇದನ್ನು ಬಳಸಲಾಗುತ್ತದೆ.