Thursday, December 25, 2025
Google search engine

Homeರಾಜ್ಯಸುದ್ದಿಜಾಲದಿ.ಅಬ್ದುಲ್ ನಜೀರ್ ಸಾಬ್ ರವರ ಚಿಂತನೆಗಳನ್ನು ಜನರಲ್ಲಿ ಮೂಡಿಸುವ ಅಗತ್ಯವಿದೆ : ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ

ದಿ.ಅಬ್ದುಲ್ ನಜೀರ್ ಸಾಬ್ ರವರ ಚಿಂತನೆಗಳನ್ನು ಜನರಲ್ಲಿ ಮೂಡಿಸುವ ಅಗತ್ಯವಿದೆ : ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ

ವರದಿ, ಎಡತೊರೆ ಮಹೇಶ್

ಮೈಸೂರು : ಮೈಸೂರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜನ ವಿಕಾಸ ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಹಾಗೂ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ ಕರ್ನಾಟಕದ ಪಂಚಾಯತ್ ರಾಜ್ ಪಿತಾಮಹ ಗ್ರಾಮೀಣಾಭಿವೃದ್ಧಿ ಹರಿಕಾರ ದಿವಂಗತ ಅಬ್ದುಲ್ ನಜೀರ್ ಸಾಗರ 92ನೇ ಜನ್ಮ ದಿನಾಚರಣೆಯಲ್ಲಿ ಅವರ ಪುತ್ಥಳಿ ಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಮುಂದುವರೆದು ಗ್ರಾಮಗಳ ಸಬಲೀಕರಣದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯವೆಂದು ಅಪಾರವಾಗಿ ನಂಬಿದ್ದ ನಜೀರ್ ಸಾಬ್ ರವರು ಗ್ರಾಮೀಣ ಜನರ ಬದುಕನ್ನು ಸುಧಾರಾಸಿಕೊಳ್ಳಲು ಮಹಾತ್ಮ ಗಾಂಧಿಯವರ ಸ್ವರಾಜ್ಯದ ಚಿಂತನೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ಸಮೀಕರಿಸಿದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಸಂವಿಧಾನದ ಆಶಯವನ್ನು ಜಾರಿಗೆ ತರಲು ಶ್ರಮಿಸಿದರು.

ಬಳಿಕ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿ, ಅಬ್ದುಲ್ ನಜೀರ್ ಸಾಬ್ ರವರ ಜನುಮ ದಿನವನ್ನು ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಪಂಚಾಯತ್ ಸಬಲೀಕರಣದ ದಿನವನ್ನಾಗಿ ಆಚರಿಸಬೇಕು ಹಾಗೂ ಅವರ ಭಾವಚಿತ್ರವನ್ನು ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಗಳಲ್ಲಿ ಹಾಕಲು ಕಡ್ಡಾಯಗೊಳಿಸಬೇಕು. ಅಲ್ಲದೆ ನಜೀರ್ ಸಾಬ್ ರವರ ಕರ್ಮಭೂಮಿ ಗುಂಡ್ಲುಪೇಟೆಯಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕ್ರಮ ವಹಿಸುವಂತೆ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಿದರು.

ನಂತರ ಮಾತನಾಡಿದ ಒಕ್ಕೂಟದ ಸಲಹೆಗಾರ ರಾಜಾ ಹುಣಸೂರು ರಾಜ್ಯ ಹಾಗೂ ಕೇಂದ್ರ ಸರ್ಕಾರದ 3000 ಜನರಲ್ಲಿ ಕೇಂದ್ರಿಕೃತವಾದ ರಾಜಕೀಯ ಅಧಿಕಾರವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಹಾಗೂ ಮಹಿಳೆಯರು ಸೇರಿದಂತೆ 33 ಲಕ್ಷ ಜನರು ಚಲಾಯಿಸಲು ಅವಕಾಶ ಮಾಡಿಕೊಟ್ಟ ಸಂವಿಧಾನದ 73ನೇ ತಿದ್ದುಪಡಿ ತರಲು ಮೂಲ ಪ್ರೇರಣೆ ನೀಡಿದ ಮಹಾನ್ ವ್ಯಕ್ತಿತ್ವ ನಜೀರ್ ಸಾಬ್ ಅವರ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿ ಕೊಂಡು ಪಂಚಾಯತ್ ವ್ಯವಸ್ಥೆ ಯನ್ನು ಬಳಗೊಳಿಸುವ ಮೂಲಕ ಪ್ರಜಾಪ್ರಭುತ್ವ ಆಶಯವನ್ನು ಜಾರಿಗೊಳಿಸ ಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಬೃಂದಾ ಕೃಷ್ಣೇಗೌಡ, ಜಿಲ್ಲಾ ಅಧ್ಯಕ್ಷ ನಾಗರಾಜ್, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರಾಜ ಹುಣಸೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಡತೊರೆ ಮಹೇಶ್, ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ರೇಖಾ ಗುರುಸ್ವಾಮಿ, ನಂದಕುಮಾರ, ಸುಜಾತ, ಆಶಾ, ಮೈಸೂರು ತಾಲೂಕು ಘಟಕದ ಅಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಮಹದೇವ್, ಹನೂರು ನಾರಾಯಣ್ ಮತ್ತು ನಾಗರಾಜು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular