ರಾಮನಗರ: ಎಲ್ಲಾ ಪಕ್ಷದಲ್ಲೂ ಅಸಮಧಾನ ಇರುವಂತದ್ದೆ. ಕಾರ್ಯದೊತ್ತಡ ಹಿನ್ನಲೆ ಶಾಸಕರಿಗೆ ಸಚಿವರು ಸ್ಪಂದಿಸಲು ಆಗೊದಿಲ್ಲ.. ಅಸಮಾಧಾನ ಎಲ್ಲರ ಮೇಲೂ ಇರುತ್ತದೆ. ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವುದು ಬೇಡ ಎಂದು ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿದ್ದಾರೆ.
ರಾಮನಗರದಲ್ಲಿ ಸಚಿವರು ಶಾಸಕರಿಗೆ ಸ್ಪಂದಿಸುತ್ತಿಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,
ಟ್ರಾನ್ಸ್ ಫರ್ ವಿಚಾರ, ಸಣ್ಣ ಪುಟ್ಟ ಕೆಲಸಗಳು ಆಗಿಲ್ಲ ಎಂದು ಅಸಮಾಧಾನ ಇರುತ್ತದೆ. ಇದನ್ನೆಲ್ಲಾ ಸರಿಪಡಿಸುವ ಕೆಲಸವನ್ನು ಸಿಎಂ ಹಾಗೂ ಡಿಸಿಎಂ ಮಾಡ್ತಾರೆ. ಅಸಮಾಧಾನ ಬಗ್ಗೆ ಶಾಸಕರ ಪತ್ರ ವ್ಯವಹಾರ ವಿಚಾರವೆಲ್ಲಾ ಬೋಗಸ್, ಯಾರು ಸಹ ಪತ್ರಗಳನ್ನು ಬರೆದಿಲ್ಲ. ಪತ್ರವನ್ನು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣಾ ಸಂಬಂಧ ದೆಹಲಿಗೆ ಮಂತ್ರಿಗಳು ಹೋಗಿದ್ದಾರೆ. ಚುನಾವಣೆಯ ಜವಾಬ್ದಾರಿ ನೀಡಲು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದರು.
ಬಿಜೆಪಿ ಸರ್ಕಾರದಿಂದ ಜನ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಪಕ್ಷ ಸಾಮಾನ್ಯ ಜನರಿಗಾಗಿ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿಗಳ ಒತ್ತಡ ಜಾಸ್ತಿ ಆಗಿದೆ. ಹಣ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಕ್ರೂಡಿಕರಣ ಮಾಡೋದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. 6 ತಿಂಗಳ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.
ಯಾರಿಂದ ಕೂಡ ಸರ್ಕಾರ ಬೀಳಿಸಲು ಸಾಧ್ಯವಿಲ್ಲ
ಕಾಂಗ್ರೆಸ್ ನ 5 ಗ್ಯಾರಂಟಿಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ. ಸ್ವತಂತ್ರ ಬಂದ ನಂತರವೂ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಆರೋಪ ಇತ್ತು. ಈಗ ಎಲ್ಲಾ ಪುಣ್ಯಕ್ಷೇತ್ರಗಳು ಹೆಣ್ಣು ಮಕ್ಕಳಿಂದ ಕೂಡಿದೆ. ಇದೆಲ್ಲವನ್ನೂ ನೋಡಿದಾಗ ವಿರೋಧ ಪಕ್ಷದವರಿಗೆ ತಲೆ ಕೆಡುತ್ತದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡ್ತಿದ್ದಾರೆ. ಇದೆಲ್ಲಾ ಅವರ ಕನಸು..! ಯಾರಿಂದ ಕೂಡ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
40 ಜನ ಶಾಸಕರನ್ನು ಕರೆದುಕೊಂಡು ಹೋಗೊಕೆ ಆಗುತ್ತಾ..? ಸಿದ್ದರಾಮಯ್ಯ ಅವರು ಏನು ನಿದ್ದೆ ಮಾಡ್ತಾ ಇದ್ದಾರ…? ಸಿದ್ದರಾಮಣ್ಣ ಏನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಇಲ್ಲವಲ್ಲ. ಎಲ್ಲಾ ಶಾಸಕರನ್ನ ಭೇಟಿ ಮಾಡಿ ಅವರ ಸಮಸ್ಯೆ ಕೇಳ್ತಾರೆ. ಜೊತೆಗೆ ಸಣ್ಣಪುಟ್ಟ ಏನೇ ಆದ್ರೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಇದ್ದಾರೆ. ಅವರು ಯಾವುದೇ ಹೋಟೆಲ್ ನಲ್ಲಿ ಇಲ್ಲ… ಡಿಕೆ ಶಿವಕುಮಾರ್ ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡ್ತಾ ಇದ್ದಾರೆ ಎಂಬ ಊಹಾಪೋಹ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಬಾಲಕೃಷ್ಣ ಟಾಂಗ್ ನೀಡಿದರು.