Wednesday, December 31, 2025
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಡಿಸೆಂಬರ್ 31ಕ್ಕೂ ಮದ್ಯಕ್ಕೆ ಬೇಡಿಕೆ ಇಲ್ಲ, ಶೇ.58 ರಷ್ಟು ಇಳಿಕೆ ದಾಖಲೆ

ಡಿಸೆಂಬರ್ 31ಕ್ಕೂ ಮದ್ಯಕ್ಕೆ ಬೇಡಿಕೆ ಇಲ್ಲ, ಶೇ.58 ರಷ್ಟು ಇಳಿಕೆ ದಾಖಲೆ

ಚಿಕ್ಕಬಳ್ಳಾಪುರ : ಹೊಸ ವರ್ಷದ ಪಾರ್ಟಿ ಅಂದ್ರೆ ಅಲ್ಲಿ ಮದ್ಯ ಇರಲೇ ಬೇಕು. ಎಣ್ಣೆ ಇಲ್ಲದಿದ್ರೆ ಅದೆಂತಾ ಪಾರ್ಟಿ ಗುರೂ ಎಂದು ಮೂಗು ಮುರಿಯೋರ ನಡುವೆಯೂ ಮದ್ಯದ ಬೇಡಿಕೆ ಕುಸಿದಿದೆ ಎಂಬುದನ್ನು ನೀವು ನಂಬಬೇಕಿದೆ. ಹೊಸ ವರ್ಷದ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಮದ್ಯದ ಬೇಡಿಕೆ ಶೇ.58ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸದರೆ ಇದು ಭಾರಿ ಪ್ರಮಾಣದ ಇಳಿಕೆಯಾಗಿದೆ.

ಹೌದು, 2024ರ ಡಿಸೆಂಬರ್​​ 31ಕ್ಕೆ ಹೋಲಿಸಿದರೆ ಈ ವರ್ಷ ಡಿಸೆಂಬರ್​​ 31ರ ಮದ್ಯ ಮಾರಾಟದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಮದ್ಯ ಬೇಡಿಕೆಯಲ್ಲಿ ಶೇ. 58.8ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಬಲವಂತ ಮಾಡಿ ಬಾರ್​​ಗಳಿಗೆ ಮದ್ಯ ಸರಬರಾಜು ಮಾಡಬೇಕಾದ ಸ್ಥಿತಿ ಉದ್ಭವಿಸಿದ್ದು, ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಪರದಾಟ ನಡೆಸುತ್ತಿದೆ.

ಕಳೆದ ವರ್ಷ ಡಿಸೆಂಬರ್​​ 31ರಂದು 13,191 ಕೇಸ್​​/ಬಾಕ್ಸ್​​ ಮದ್ಯ ಮಾರಾಟವಾಗಿದ್ದರೆ ಈ ವರ್ಷ ಡಿಸೆಂಬರ್​​ 31ರಂದು 5,516 ಕೇಸ್​​/ಬಾಕ್ಸ್​​ ಮಾತ್ರ ಸೇಲ್​​ ಆಗಿದೆ. ಅಂದರೆ ಶೇ. 58.18ರಷ್ಟು ಕುಸಿತವಾಗಿದೆ. ಇದೇ ದಿನಾಂಕಗಳಲ್ಲಿ ಕಳೆದ ವರ್ಷ 5,384 ಕೇಸ್​​/ಬಾಕ್ಸ್​​ ಬಿಯರ್​​ ಮಾರಾಟವಾಗಿದ್ದರೆ, ಈ ಬಾರಿ 4,741 ಕೇಸ್​​/ಬಾಕ್ಸ್​​ ಮಾರಾಟವಾಗಿದೆ. ಆ ಮೂಲಕ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ.

ದುಡಿಮೆ ಇಲ್ಲದ ಕಾರಣ ಹಣ ಸಂಪಾದನೆ ಇಲ್ಲ. ಸರಿಯಾಗಿ ಮಳೆ ಆಗದಿರೋದ್ರಿಂದ ಬೆಳೆ ಇಲ್ಲದೆಯೂ ಜನರ ಆದಾಯಕ್ಕೆ ಖೋತಾ ಆಗಿದೆ. ಇದರ ನಡುವೆ ಮದ್ಯದ ಬೆಲೆಯೂ ಏರಿಕೆಯಾಗಿದೆ. ಲಿಕ್ಕರ್​​ಗಳ ಮೇಲೆ 10-15 ರೂಪಾಯಿ ಹೆಚ್ಚಾಗಿರುವ ಆಗಿರುವ ಕಾರಣ ಕುಡಿಯುವರಿಗೆ ಸಮಸ್ಯೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಹೊಸ ವರ್ಷದ ವೇಳೆ ಮದ್ಯ ಖರೀದಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಎಂದು ಬಾರ್​​ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular