Saturday, April 19, 2025
Google search engine

Homeರಾಜ್ಯಸುದ್ದಿಜಾಲಕೇಳುವವರಾರಿಲ್ಲ ವೃದ್ದೆಯ ಗೋಳು..... ಸೂರಿಲ್ಲದ ಈಕೆಯ ಬಾಳು

ಕೇಳುವವರಾರಿಲ್ಲ ವೃದ್ದೆಯ ಗೋಳು….. ಸೂರಿಲ್ಲದ ಈಕೆಯ ಬಾಳು

ಮಂಡ್ಯ: ಸೂರಿಗಾಗಿ ಬಿಸಿಲು, ಮಳೆ- ಚಳಿ ಅಂತಾನೂ ಲೆಕ್ಕಿಸದೆ ನನ್ನವರು ಯಾರು ಇಲ್ಲ ಅಂತ ಗೋಳಾಡುತ್ತಿರೋ ವೃದ್ಧೆ ಗಾಯಿತ್ರಮ್ಮ, ಮಂಡ್ಯ ತಾಲೂಕಿನ ಜಯಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರೆ.

ಕಳೆದ 25 ವರ್ಷಗಳಿಂದಲೂ ರಸ್ತೆ ಬದಿಯಲ್ಲಿ ವಾಸ ಮಾಡುತ್ತಿದ್ದು, ಗಂಡ ಹಾಗೂ ತಮ್ಮನನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಇದ್ದೊಬ್ಬ ಮಗಳಿಂದಲೂ ನಿರ್ಲಕ್ಷಕ್ಕೆ ಒಳಗಾಗಿ ಕೂಲಿ ಕೆಲಸ ಮಾಡಿಕೊಂಡು ಗಂಜಿ ಕುಡಿದು ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಕುರಿಗಳನ್ನು ಸಾಕಿಕೊಂಡಿದ್ದು ಆ ಕುರಿಗಳನ್ನು ಸಹ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಶನಿ ಭಕ್ತೆ ಆಗಿರುವ ಗಾಯಿತ್ರಮ್ಮ ಸೂರಿಗಾಗಿ ಪರದಾಡುತ್ತಾ ಕಂಡ ಕಂಡವರ ಬಳಿ ಸಹಾಯಕ್ಕಾಗಿ ಹಸ್ತ ಚಾಚಿದರೂ, ಅವರಿಗೆ ಹೇಳುವರು ಕೇಳುವವರು ಯಾರಿಲ್ಲವೆಂದು ನಿರ್ಲಕ್ಷಕ್ಕೆ ಒಳಗಾಗಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ,ಜನಪ್ರತಿನಿಧಿಗಳಾಗಲಿ ಯಾರು ಸಹ ಇವರ ಸಹಾಯಕ್ಕೆ ಬಾರದಿರುವುದು ವಿಪರ್ಯಾಸವೇ ಸರಿ ….! ಎಲ್ಲರಿಗೂ ಸೂರು ಎಂದೇಳುವ ಸರ್ಕಾರಗಳೇ ಬಡವರ ನಿರ್ಲಕ್ಷ ಮಾಡುತ್ತಿರುವುದು ನಿಜವಾಗಲೂ ಬೇಸರದ ಸಂಗತಿ…. ಸಹಾಯಕ್ಕಾಗಿ ಕಣ್ಣು ಬಾಯಿ ಬಿಡುತ್ತಾ ಜನಪ್ರತಿನಿಧಿಗಳ ಬಳಿ ಅಲೆದಾಡಿದರು ಯಾವುದೇ ಪ್ರಯೋಜನವಾಗಿಲ್ಲ.

RELATED ARTICLES
- Advertisment -
Google search engine

Most Popular