Tuesday, February 10, 2026
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳದ ಕಾರ್ಯಕ್ಕೆ ಸರಿಸಮನಾದ ಮತ್ತೊಂದು ಧರ್ಮಕಾರ್ಯ ಇಲ್ಲ : ಪ್ರವೀಣ್ ಕುಮಾರ್

ಧರ್ಮಸ್ಥಳದ ಕಾರ್ಯಕ್ಕೆ ಸರಿಸಮನಾದ ಮತ್ತೊಂದು ಧರ್ಮಕಾರ್ಯ ಇಲ್ಲ : ಪ್ರವೀಣ್ ಕುಮಾರ್

ಬಾಗೇಪಲ್ಲಿ : ಜೀವನ ನಡೆಸಲು ಕಷ್ಠಪಡುತ್ತಿರುವ ಅನಾಥರು, ವೃದ್ದರಿಗೆ ಪ್ರತಿ ತಿಂಗಳು ಹಣ ನೀಡುವ ಜೊತೆಗೆ ಜೀವನೋಪಾಯಕ್ಕೆ ವಸ್ತುಗಳನ್ನು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ಕೆ ಸರಿಸಮನಾದ ಮತ್ತೊಂದು ಧರ್ಮಕಾರ್ಯ ಇಲ್ಲಾ ಎಂದು ಬಾಗೇಪಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್ ಹೇಳಿದರು.

ಈ ಬಗ್ಗೆ ಅವರು ಪಟ್ಟಣದ 10 ವಾರ್ಡಿನ ರಾಘವೇಂದ್ರ ಚಿತ್ರಮಂದಿರ ವ್ಯಾಪ್ತಿಯಲ್ಲಿ ಇರುವ ರಮೀದಾ ಹಾಗೂ ಪ್ಯಾರೀಮಾ ಎಂಬ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಾತ್ಸಲ್ಯ ಕಿಟ್ ಫಲಾನುಭವಿಗಳಿಗೆ ಅಗತ್ಯ ಇರುವ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿ, ಕಷ್ಠದ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಅನಾಥರು, ಅಭಲೆಯರನ್ನು ಗುರುತಿಸಿ ಅವರ ಮನೆಯ ಬಾಗಿಲಿಗೆ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಿಶ್ವದಲ್ಲಿಯೇ ಮಾದರಿ ಯೋಜನೆಯಾಗಿದೆ ಎಂದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಲಯದ ಮೇಲ್ವಿಚಾರಕಿ ಇಂದಿರಾ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗಬೇಕು ಅವರ ನೋವಿನೊಂದಿಗೆ ನಾವು ಇರಬೇಕು ಎನ್ನುವ ಸದುದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಮಾಸಾಶನ ಮತ್ತು ವಾಸ್ತಲ್ಯ ಕಿಟ್ ವಿತರಣೆಗಳು ಸೇರಿವೆ.

ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿರುವುದರಿಂದ ಅವರು ತಮ್ಮ ಔಷಧಿ ಸೇರಿದಂತೆ ಅಗತ್ಯೆತೆಯನ್ನು ಪೂರೈಸಿಕೊಳ್ಳಲು ಸಹಕಾರಿಯಾಗುತ್ತಿದ್ದು, ಇದರ ಜೊತೆಗೆ ವಿದ್ಯಾರ್ಥಿವೇತನ, ಶಾಲಾ ಕಾಲೇಜುಗಳಿಗೆ ಅಗತ್ಯ ಪರಿಕರಗಳು ನೀಡುವ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಪೂಜ್ಯರ ಸೇವೆ ಹರಡಿಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular