ಮಂಡ್ಯ: ಸಿದ್ದರಾಮಯ್ಯರಂತ ಹಸಿ ಸುಳ್ಳು ಹೇಳುವ ಇನ್ನೊಬ್ಬ ಮುಖ್ಯಮಂತ್ರಿ ಇಲ್ಲ. ಅಭಿವೃದ್ಧಿಗೆ ಹಣ ಇಲ್ಲ, ಮನಸ್ತಾಪದ ಕೂಗು ಎದ್ದಿದೆ ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ತೈಲ ಬೆಲೆ ಹೆಚ್ಚಳ ಮಾಡಿ ನರೇಂದ್ರ ಮೋದಿ ಮೇಲೆ ಹಾಕ್ತಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕ ಖರ್ಗೆ ಅವರಿಗೆ ಮೋದಿ ಅವರ ಮೇಲೆ ಕಾಮೆಂಟ್ಸ್ ಮಾಡೋದೆ ಇವರ ಕೆಲಸ. 2021ರಲ್ಲಿ ನರೇಂದ್ರ ಮೋದಿ ಕಡಿಮೆ ಮಾಡಿದ್ದರು. ಅದಕ್ಕೆ ಪೂರ್ವಕವಾಗಿ ಬೊಮ್ಮಾಯಿ ಅವರು ರಾಜ್ಯದಲ್ಲಿ ಕಡಿಮೆ ಮಾಡಿದ್ರು. ಸಿದ್ದರಾಮಯ್ಯ ಅವರು ಮಾಹಿತಿ ತೆಗೆದುಕೊಂಡು ಬಿಜೆಪಿ ಬಗ್ಗೆ ಮಾತನಾಡಲಿ ಎಂದು ತಿಳಿಸಿದರು.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಬಡವರ ಮೇಲೆ ಬರೆ ಎಳೆದಿದ್ದಾರೆ. ಲಿಕ್ಕರ್ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ. ವಿದ್ಯುತ್ ದರ 7.5ರೂ ಏರಿಕೆ, ನೀರಿನ ಬೆಲೆ, ಭೂಮಿ ಬೆಲೆ ಏರಿಕೆ. ರಾಜ್ಯದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಬರಗಾಲ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾಲೆಗಳಿಗೆ ನೀರು ಬಿಟ್ಟಿಲ್ಲ. ನಾಲೆಗೆ ನೀರು ಬಿಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸರ್ಕಾರದ ಲ್ಯಾಪ್ಸ್ ಮುಚ್ಚಿಕೊಳ್ಳಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ರೈತರ ಪರ ಯೋಜನೆ ಕೊಟ್ಟಿದ್ದಾರೆ. ಮೋದಿ ತರ ಸಿದ್ದರಾಮಯ್ಯ ಕೆಲಸ ಮಾಡಲಿ. ಮೋದಿ ಮೇಲೆ ಟೀಕೆ ಮಾಡುವುದನ್ನ ಕಾಂಗ್ರೆಸ್ ಬಿಡಬೇಕು. ಗ್ಯಾರಂಟಿಯನ್ನು ಸಹ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. 58ಸಾವಿರ ಕೋಟಿ ಮೀಸಲು ಅಂತಾರೆ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ. ಪಿಡಬ್ಲ್ಯೂಡಿ ಮಿನಿಸ್ಟರ್ ಯಾರು ಅಂತಾನೇ ಗೊತ್ತಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಮಂತ್ರಿಯಾಗಿ ಮುಂದುವರಿಯಲು ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಮೈಸೂರಿನ ಸಾಲುಂಡಿ ಗ್ರಾಮದಲ್ಲಿ ವಿಷ ನೀರು ಕುಡಿದು ಜನ ಸತ್ತಿದ್ದಾರೆ. ಮದುಗಿರಿಯಲ್ಲಿ ನೀರು ಕುಡಿದು ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಅರ್ ಗರ್ ಯೋಜನೆ ತರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಇರುತ್ತಿತ್ತು. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಪಿಡ್ಲ್ಯುಡಿ ಸಚಿವ ಎಲ್ಲಿದ್ದಾರೆ? ಅಭಿವೃದ್ಧಿಗೆ ಹಣ ಇಲ್ಲ, ಅವರಲ್ಲೆ ಮನಸ್ತಾಪದ ಕೂಗು ಎದ್ದಿದೆ. ಅದನ್ನ ಮುಚ್ಚಿಕೊಳ್ಳಲು ಈ ರೀತಿಯ ಬೆಲೆ ಏರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಬೆಲೆ ಏರಿಕೆ ಮಾಡ್ತಿರೋದು ತಪ್ಪು ಬಿಜೆಪಿ ಖಂಡಿಸುತ್ತದೆ ಎಂದರು.
ಬಿಜೆಪಿ ರೇಣುಕಾಸ್ವಾಮಿ ನ್ಯಾಯದ ಪರ ಇರುತ್ತದೆ
ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, ದರ್ಶನ್ ಮಾಡಿರುವುದು ತಪ್ಪು, ಈಗಾಗಲೇ ಪೊಲೀಸ್ ಇಲಾಖೆ ತನಿಖೆ ಮಾಡ್ತಿದೆ. ಕೆಲವರನ್ನ ಜೈಲಿಗೆ ಹಾಕಿದ್ದಾರೆ, ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕೂಲಂಕುಷವಾಗಿ ವಿಚಾರಣೆ ಮಾಡಿ ನ್ಯಾಯ ಸಮ್ಮತ್ತವಾಗಿ ಎಫ್.ಐ.ಆರ್ ಹಾಕಬೇಕು. ಪ್ರಾಣ ಕಳೆದುಕೊಂಡ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಬಿಜೆಪಿ ರೇಣುಕಾಸ್ವಾಮಿ ನ್ಯಾಯದ ಪರ ಇರುತ್ತದೆ ಎಂದರು.