Saturday, April 19, 2025
Google search engine

Homeರಾಜಕೀಯರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ: ಮಧು ಬಂಗಾರಪ್ಪ

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ: ಮಧು ಬಂಗಾರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಪರಿಸ್ಥಿತಿಯಂತೂ ಈಗ ಇಲ್ಲ. ಹೀಗಾಗಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಗೆ ಸಮಸ್ಯೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯುತ್ ಖರೀದಿ ದುಪ್ಪಟ್ಟು ಮಾಡಲಾಗಿದೆ. ಬಹಳ ಕಷ್ಟ ಅನ್ನುವ ಪರಿಸ್ಥಿತಿ ಈಗ ಇಲ್ಲ. ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂಬ ನೆಪದಲ್ಲಿ ಜನರಿಗೆ ಬೇರೆ ಸವಲತ್ತುಗಳನ್ನು ಕೊಡುವುದನ್ನು ನಿಲ್ಲಿಸುವುದಿಲ್ಲ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ ಎಂದರು.

ಸರ್ಕಾರ ಬೀಳಿಸುತ್ತೇವೆ ಅನ್ನೋದು, ಅನಗತ್ಯ ಟೀಕೆ ಮಾಡುವುದು ಬಿಟ್ಟು ವಿರೋಧ ಪಕ್ಷದವರು ಭಾಗ್ಯಗಳ ಲಾಭವ ಸಿಗದ ಫಲಾನುಭವಿಗಳ ಗುರುತಿಸಿ ಅವರಿಗೆ ಕೊಡಿಸುವ ಕೆಲಸ ಮಾಡಲಿ ಎಂದು ಮಧು ಬಂಗಾರಪ್ಪ ಹೇಳಿದರು.

ವಿರೋಧ ಪಕ್ಷದ ನಾಯಕ ಛಾಯಾ ಮುಖ್ಯಮಂತ್ರಿ ಇದ್ದಂತೆ. ಹೀಗಾಗಿ ಆರ್.ಅಶೋಕ್ ಅವರು ಘನತೆಯಿಂದ ಮಾತಾಡಬೇಕು. ಸರ್ಕಾರ ಬೀಳಿಸುವ ಯೋಚನೆ, ಹುಚ್ಚು ಕೆಲಸ ಬಿಡಿ ಎಂದು ಸಲಹೆ ನೀಡಿದರು.

RELATED ARTICLES
- Advertisment -
Google search engine

Most Popular