Friday, April 11, 2025
Google search engine

Homeರಾಜಕೀಯಬೇರೆಯವರನ್ನು ಸಿಎಂ ಮಾಡುವ ಪ್ರಶ್ನೆನೇ ಈಗ ಬರುವುದಿಲ್ಲ: ಸಚಿವ ಜಿ.ಪರಮೇಶ್ವರ್

ಬೇರೆಯವರನ್ನು ಸಿಎಂ ಮಾಡುವ ಪ್ರಶ್ನೆನೇ ಈಗ ಬರುವುದಿಲ್ಲ: ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಆಗಲಿ ಅಥವಾ ಬೇರೆಯವರನ್ನು ಸಿಎಂ ಮಾಡುವ ಪ್ರಶ್ನೆಯೇ ಈಗ ಬರಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ ಅಂತ ನಾವೆಲ್ಲರೂ ಹೇಳುತ್ತಿದ್ದೇವಲ್ಲ. ಆ ಪ್ರಶ್ನೆ ಎಲ್ಲಿ ಬರುತ್ತೆ ಈಗ ಎಂದು ಕೇಳಿದರು.

ಕೋವಿಡ್ ಹಗರಣಗಳ ಸಂಬಂಧ ನ್ಯಾ. ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗದಿಂದ ವರದಿ ವಿಚಾರವಾಗಿ ಮಾತನಾಡಿ, ನ್ಯಾ. ಮೈಕೆಲ್ ಕುನ್ಹಾ ಅವರು ವರದಿ ಕೊಡಲು ಇನ್ನೂ ಕಾಲಾವಕಾಶ ಬೇಕು ಅಂತ ಕೇಳಿದ್ರು. ನಾವು ಇನ್ನೂ ಆರು ತಿಂಗಳು ಕಾಲಾವಕಾಶ ಕೊಟ್ಟಿದ್ದೇವೆ. ಈಗ ಅವರು ಮಧ್ಯಂತರ ವರದಿ ಕೊಡುವ ಸಾಧ್ಯತೆ ಇರಬಹುದು ಎಂದು ತಿಳಿಸಿದರು.

ಜೈಲಿನಲ್ಲಿ ದರ್ಶನ್ ವಿಡಿಯೋ ಕಾಲ್ ಪ್ರಕರಣ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನಮಗೆ ಯಾವುದೇ ರಿಪೋರ್ಟ್ ಇನ್ನೂ ಬಂದಿಲ್ಲ. ಇದರ ತನಿಖೆಯನ್ನು ಐಪಿಎಸ್ ಅಧಿಕಾರಿ ಚಂದ್ರಗುಪ್ತ ಮಾಡ್ತಿದ್ದಾರೆ. ತನಿಖೆ ನಂತರ ಏನು ವರದಿ ಬರುತ್ತೆ ಅಂತ ನೋಡೋಣ ಎಂದು ಹೇಳಿದರು.

ಸಿಎಂ ಆಪ್ತ, ಕಾಂಗ್ರೆಸ್​ ಹಿರಿಯ ಮುಖಂಡ ಮರಿಗೌಡ ಅವರ ಪತ್ನಿ 6 ಕೋಟಿ ಮೌಲ್ಯದ ಬಂಗಲೆ ಖರೀದಿ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿರೋ ವಿಷಯ ಹೇಗೆ ಹೇಳೋದು ಎಂದರು.

RELATED ARTICLES
- Advertisment -
Google search engine

Most Popular