Thursday, April 3, 2025
Google search engine

Homeಸ್ಥಳೀಯಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮೈಸೂರು : ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಪ್ರಶ್ನೆಯೇ ಬಂದಿಲ್ಲ. ಪ್ರಶ್ನೆಯೇ ಇಲ್ಲದ ಮೇಲೆ ಬದಲಾವಣೆ ಎಲ್ಲಿಂದ ಹೇಳಿ? ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶಾಸಕರು ಮುದ್ರೆ ಒತ್ತಿದ್ದಾರೆ. ಹೈಕಮಾಂಡ್ ಅದನ್ನು ನಿರ್ದೇಶಿಸಿದೆ. ಹೀಗಾಗಿ, ಸಿಎಂ ತಮ್ಮ ಸ್ಥಾನದಲ್ಲಿ ಗಟ್ಟಿಯಾಗಿಯೇ ಇದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ರಾಜಕೀಯ ಪಿತೂರಿಯ ಕೇಸ್ ಇದು. ಕ್ಲೀನ್ ಚೀಟ್ ಸಿಕ್ಕ ಕಾರಣ ಸಂತೋಷವಾಗಿದೆ. ರಾಜಕೀಯವಾಗಿ ಪ್ರತಿಪಕ್ಷಗಳು ಈ ದಾವೆಯನ್ನು ಬಳಸಿಕೊಂಡಿದ್ದವು. ಸಿದ್ದರಾಮಯ್ಯ ದೋಷಿನೇ ಆಗಿರಲಿಲ್ಲ. ಹೀಗಾಗಿ ನಿರ್ದೋಷಿ ಪ್ರಶ್ನೆಯೆ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಮೊದಲಿನಿಂದಲೂ ಗಟ್ಟಿಯಾಗಿದ್ದರು. ಈ ಕ್ಲೀನ್‌ಚೀಟ್ ನಿಂದ ಅವರು ಗಟ್ಟಿ ಆಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯರ ಆತ್ಮಸಾಕ್ಷಿ ಮೊದಲಿನಿಂದಲೂ ತಾವು ತಪ್ಪು ಮಾಡಿಲ್ಲ ಎಂದು ಹೇಳುತ್ತಿತ್ತು. ನಮಗೂ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದು ಗೊತ್ತಿತ್ತು ಎಂದು ಡಾ.ಮಹದೇವಪ್ಪ ಹೇಳಿದರು. ದಲಿತ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಭೆ ಸೇರಬಾರದು, ಮಾತಾಡಬಾರದು ಅಂತ ಎಲ್ಲಿದೆ ಹೇಳಿ? ಸಮಾವೇಶ ಮಾಡುವುದಾದರೇ ಬಹಳ ಚೆನ್ನಾಗಿ ದೊಡ್ಡ ಮಟ್ಟದಲ್ಲಿ ಸಭೆ ಮಾಡುತ್ತೇವೆ ಎಂದರು.

ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಬದಲಿಸುವ ವಿಚಾರದಲ್ಲಿ ಎಲ್ಲವನ್ನೂ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಸಚಿವ ರಾಜಣ್ಣ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಮುಡಾ ಪ್ರಕರಣದಲ್ಲಿ ಸಿದ್ಧರಾಮಯ್ಯ ರಾಜೀನಾಮೆ ಕೇಳುತ್ತಿದ್ದವರಿಗೆ ಲೋಕಾಯುಕ್ತ ಸಾಕ್ಷಿಯೇ ಇಲ್ಲ ಎಂದಿದೆ

RELATED ARTICLES
- Advertisment -
Google search engine

Most Popular