ಮಂಡ್ಯ: ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಸ್ಪಷ್ಟನೆ ನೀಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ನಾನು ಪುಟ್ಟರಂಗ ಶೆಟ್ಟಿ ಕಳೆದ ಮೂರು ದಿನಗಳಿಂದ ಕೊಡಗುನಲ್ಲಿದ್ದೇವು. ನಮಗೆ ಯಾವುದೇ ಅಸಮಾಧಾನ ಇಲ್ಲ ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದರು.
ಕಾವೇರಿ ವಿಚಾರದಲ್ಲಿ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯ ಆಗಬಾರದು. ಹಿಂದಿನಿಂದಲೂ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಂದರು.
ನಾಳೆ ನಮ್ಮ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಕಾವೇರಿ ಹೋರಾಟ ಹಮ್ಮಿಕೊಂಡಿದ್ದು, ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಲಾಗುವುದು. ದೊಡ್ಡ ಮಟ್ಟದಲ್ಲಿ ಕಾವೇರಿ ಹೋರಾಟ ಮಾಡ್ತೇವೆ. ನಾವು ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ. ಕಾವೇರಿ ವಿಚಾರದಲ್ಲಿ ಜನಪ್ರತಿನಿದಿಗಳು ಸೇರಿದಂತೆ ಎಲ್ಲರು ರೈತರ ಪರ ಹೋರಾಟ ಮಾಡಿ. ಸಂಸದರು ಕೂಡ ಹೋರಾಟ ಮಾಡಬೇಕು ರೈತರ ಪರ ನಿಲ್ಲಬೇಕು ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅನಾರೋಗ್ಯದ ವಿಚಾರವಾಗಿ ಮಾತನಾಡಿ, ಅವರು ಆರೋಗ್ಯವಾಗಿ ಇದ್ದಾರೆ. ಇವತ್ತು ಡಿಸ್ಚಾರ್ಜ್ ಆಗ್ತಾರೆ ಎಂದರು.