ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಸದ್ಯ ಖಾಲಿ ಇಲ್ಲ. ಆರ್ ವಿ ದೇಶಪಾಂಡೆಯವರು ನಮ್ಮ ಪಕ್ಷದಲ್ಲಿ ಅತ್ಯಂತ ಹಿರಿಯ ವ್ಯಕ್ತಿ, ಅವರಿಗೆ ಸಾಕಷ್ಟು ಅನುಭವವಿದೆ, ಅವರಿಗೆ ಗೌರವ ಕೊಡುತ್ತೇವೆ ಆದರೆ ಸರ್ಕಾರದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿ ಕೆಲಸ ಮುಂದುವರಿಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥ ಎಂದು ತೀರ್ಮಾನವಾದರೆ ಹೇಗೆ ಎಂದು ಕೇಳಿದ್ದಕ್ಕೆ ಏನೂ ಆಗುವುದಿಲ್ಲ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಕೆಲಸ ಮಾಡುತ್ತಾರೆ ಎಂದರು.
ಇದೇ ವೇಳೆ ಡಾ.ಕೆ. ಸುಧಾಕರ್ ಅವರ ಕಾಂಗ್ರೆಸ್ ಅವರು ಏನು ಸತ್ಯ ಹರಿಶ್ಚಂದ್ರರಾ? ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಾಪ ಅವರು ಮಾತಾಡ್ತಾರೆ, ಮಾತಾಡಲಿ. ಅವರು ಕಾಂಗ್ರೆಸ್‌ನಲ್ಲಿ ಇದ್ದವರಲ್ಲವಾ? ಅವರೇ ಕಾಂಗ್ರೆಸ್ ಬಗ್ಗೆ ಸರ್ಟಿಫಿಕೇಟ್ ಕೊಡಲಿ. ಕೋವಿಡ್ ಅಕ್ರಮ ಆರೋಪ ತನಿಖಾ ವರದಿಯಲ್ಲಿ ಏನಿದೆ ನನಗೇನು ಗೊತ್ತಿಲ್ವಾ ಎಂದು ತಿರುಗೇಟು ಕೊಟ್ಟಿದ್ದಾರೆ.