Friday, April 4, 2025
Google search engine

Homeರಾಜಕೀಯಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು: ಎಂಬಿ ಪಾಟೀಲ್​ ತಿರುಗೇಟು

ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು: ಎಂಬಿ ಪಾಟೀಲ್​ ತಿರುಗೇಟು

ಬೆಂಗಳೂರು: ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿದ ಅನುಭವ ಇರಬೇಕು. ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನಮ್ಮ ಜನಪ್ರಿಯ ನಾಯಕರು. ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು ಎಂದು ಸಚಿವ ಎಂ ಬಿ ಪಾಟೀಲ್ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಚೇಲಾ ಎಂ.ಬಿ.ಪಾಟೀಲ್ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದು, ನಾನು ಕಾಂಗ್ರೆಸ್ ‌ಪಕ್ಷದ ಚೇಲಾ, ಯಾರಿಗೂ ಚೇಲಾ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಮುಂಚೆ ನಾನು ಕಾಂಗ್ರೆಸ್ ​ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ಇವರು ಚೇಲಾ ಅಂತಾರೆ, ಬಿ ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡುತ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ. ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ಇನಿಷಿಯೇಟಿವ್​ ತೆಗೆದುಕೊಂಡು ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದರು.

ನನ್ನ ಹೆಗಲ ಮೇಲೆ ಯಾರೂ ಬಂದೂಕು ಇಟ್ಟು ಹೊಡೆಯಬೇಕಿಲ್ಲ. ಯಾರಿಗಾದರೂ ಹೊಡೆಯಬೇಕು ಅಂದರೇ ನಾನೇ ಹೊಡೆಯುತ್ತೇನೆ. ನಾನು ವಿಜಯಪುರದವನು, ಆ ಶಕ್ತಿ ನನಗೆ ಇದೆ ಎಂದು ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ಮಾಡಿದರು.

ಬಿಎಲ್​ ಸಂತೋಷ್ ಅವರನ್ನು​​ ಟೀಕೆ ಮಾಡಿದರೆ ಬ್ರಾಹ್ಮಣರಿಗೆ ಟೀಕೆ ಮಾಡಿದಂತೆ ಅಲ್ಲ. ಡಿ.ಕೆ.ಶಿವಕುಮಾರ್ ಟೀಕೆ ಮಾಡಿದರೇ ಒಕ್ಕಲಿಗರಿಗೆ ಟೀಕೆ ಮಾಡಿದಂತಲ್ಲ. ಅಪ್ಪಿ ತಪ್ಪಿಯೂ ಬ್ರಾಹ್ಮಣ ಸಮುದಾಯಕ್ಕೆ ಬೈದಿಲ್ಲ. ಶೇ 90ರಷ್ಟು ಬ್ರಾಹ್ಮಣ ಸಮುದಾಯ ನನ್ನನ್ನು ಬೆಂಬಲಿಸಿ ವೋಟ್​​ ಹಾಕಿದ್ದರು. ಬಿಎಲ್​ಡಿ ಸಂಸ್ಥೆಯ ರಿಜಿಸ್ಟ್ರಾರ್ ರಾಘವೇಂದ್ರ ಕುಲಕರ್ಣಿ ಬ್ರಾಹ್ಮಣರು. ಸಂಸದ ಪ್ರತಾಪ್ ಸಿಂಹ ವಿಜಯಪುರಕ್ಕೆ ಭೇಟಿ ನೀಡಿ ತಿಳಿದುಕೊಳ್ಳಲಿ. ನಮ್ಮ ಸಂಸ್ಥೆಯ ಶಿಕ್ಷಕರೂ ಬ್ರಾಹ್ಮಣರೇ ಎಂದು ತಿಳಿಸಿದರು.

ಇಂತಹ ಮಾನಸಿಕ ಸ್ಥಿತಿಯನ್ನು ಪ್ರತಾಪ್ ಸಿಂಹ ಎಲ್ಲಿ ಕಲಿತರೋ. ಪ್ರತಾಪ್​​ ಸಿಂಹ ಸಂಸದ ಸ್ಥಾನ ಇನ್ನು 10 ತಿಂಗಳು ಅಷ್ಟೇ ಇದೆ. ದಿನವೆಲ್ಲ ಪ್ರತಾಪ್ ಸಿಂಹಗೆ ಉತ್ತರ ಕೊಡುತ್ತಾ ಇರಲು ಆಗಲ್ಲ. ಪ್ರತಾಪ್ ಸಿಂಹ ಮನಸ್ಥಿತಿ ಬಗ್ಗೆ ಪಾಪ ಅನಿಸುತ್ತೆ. ಎಲ್ಲ ಜಾತಿಯ ಜನರನ್ನು ಒಟ್ಟಾಗಿ ಕೊಂಡೊಯ್ಯುವ ಹಿನ್ನೆಲೆ ನಮ್ಮದು. ಎಂ.ಬಿ.ಪಾಟೀಲ್​ ಬಳಿ ಇರೋದು ಚಿಲ್ಲರೆ ಖಾತೆ ಎಂದು ಹೇಳಿದ್ದಾರೆ. ಬೃಹತ್ ಕೈಗಾರಿಕೆ ಚಿಲ್ಲರೆ ಖಾತೆ ಎಂಬುದನ್ನು ಪ್ರಧಾನಿ ಬಳಿ ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular