Thursday, December 4, 2025
Google search engine

Homeಸಿನಿಮಾಬ್ಯುಸಿನೆಸ್‌ನಲ್ಲಿ ಇವರೇ ರಿಯಲ್ ʻಹೀರೋʼ

ಬ್ಯುಸಿನೆಸ್‌ನಲ್ಲಿ ಇವರೇ ರಿಯಲ್ ʻಹೀರೋʼ

ಬಾಲಿವುಡ್‌ನ ಬಹುತೇಕ ನಟರು, ಸಿನಿಮಾದ ಜೊತೆ ಬ್ಯುಸಿನೆಸ್‌ನಲ್ಲೂ ಬ್ಯುಸಿಯಾಗಿದ್ದಾರೆ. ಬೆಳ್ಳಿ ತೆರೆ, ರೆಡ್‌ ಕಾರ್ಪೆಟ್‌ನಲ್ಲಿ ಮಿಂಚುತ್ತಿರುವ ಇವರು ಬೋರ್ಡ್‌ ಮೀಟಿಂಗ್‌ಗಳಲ್ಲೂ ಭಾಗಿಯಾಗ್ತಿದ್ದಾರೆ. ಹಣ ಮಾಡಲು ಆದಾಯದ ವಿವಿಧ ಮೂಲಗಳು ಬೇಕು, ಒಂದೇ ಕೆಲಸ ನಂಬಿಕೊಂಡರೆ ನಾವು ಹೀಗೆ ಇರ್ತೀವಿ. ಸಿನಿಮಾದಿಂದ ಬಂದ ಹಣವನ್ನು ಇನ್‌ವೆಸ್ಟ್‌ ಮಾಡುವ ಮೂಲಕ ಉದ್ಯಮದ ಹೀರೋ ಆಗ್ತಿದ್ದಾರೆ ಕೆಲ ನಟರು.

ಇಂತಹದ್ದೆ ಒಂದು ಸಾಲಿನಲ್ಲಿ ಬಾಲಿವುಡ್‌ನ ಅತ್ಯಂತ ಯಶಸ್ವಿ ಉದ್ಯಮಿಗಳು ಯಾರು ಅಂತಾ ಕೇಳಿದ್ರೆ, ಈ ಲಿಸ್ಟ್‌ನಲ್ಲಿ ಮೊದಲಿಗೆ ಬರೋದೆ ಬಿಗ್‌ ಬಿ ಪುತ್ರ ಅಭಿಷೇಕ್ ಬಚ್ಚನ್. ಸಿನಿ ರಂಗದಲ್ಲಿ ಹಲವಾರು ಏರಿಳಿತ ಕಂಡಿದ್ದರೂ, ಬ್ಯುಸಿನೆಸ್‌ ವಿಚಾರದಲ್ಲಿ ಇವರ ಲಕ್‌ ಪಕ್ಕಾ ಇದೆ. ಸಿನಿಮಾದ ಜೊತೆ ಜೊತೆ ವ್ಯವಹಾರಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾದಾ ಅಭಿಷೇಕ್‌ಗೆ ಸಿಕ್ಕಿದ್ದು ಯಶಸ್ಸು.

ಇವರು ಸುಮಾರು ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಫುಟ್ಬಾಲ್ ಮತ್ತು ಕಬಡ್ಡಿ ಸೇರಿದಂತೆ ಕ್ರೀಡಾ ಜಗತ್ತಿನಲ್ಲಿ ಪ್ರಸಿದ್ಧ ಹೂಡಿಕೆಗಳಿವೆ. ಅಮಿತಾಬ್‌ ಬಚ್ಚನ್‌, ರಿಯಲ್‌ ಎಸ್ಟೇಸ್‌ ಪ್ರಿಯರು. ಇವರು ಅಯೋಧ್ಯೆ ಸೇರಿ ಹಲವಾರು ಕಡೆ ಬೃಹತ್‌ ಪ್ರಮಾಣದ ಆಸ್ತಿ ಹೊಂದಿದ್ದಾರೆ. ಇತ್ತ ಅಭಿಷೇಕ್‌ ಬರೀ ರಿಯಲ್‌ ಎಸ್ಟೇಟ್‌ಗೆ ಸೀಮಿತವಾಗಿರದೇ, ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಅಭಿಷೇಕ್‌ ಅವರ ಜನಪ್ರಿಯ ಹೂಡಿಕೆಯಲ್ಲಿ ಕಬ್ಬಡಿಯೂ ಒಂದು. ಜೈಪುರ ಪಿಂಕ್ ಪ್ಯಾಂಥರ್ಸ್ ಕಬ್ಬಡಿ ತಂಡವನ್ನು ಇವರು ಖರೀದಿಸಿದ್ದಾರೆ. ಈ ತಂಡವು ಬಲಿಷ್ಟವಾಗಿದ್ದು, ಅಭಿಷೇಕ್‌ ಹಾಕಿದ ದುಡ್ಡನ್ನೆಲ್ಲಾ ಲಾಭದ ಮೂಲಕ ರಿಟರ್ನ್‌ ಪಡೆದಿದ್ದಾರೆ. ಕಬಡ್ಡಿ ಲೀಗ್‌ನಲ್ಲಿ ತಂಡವು ಸಾಕಷ್ಟು ಯಶಸ್ಸನ್ನು ಕಂಡಿದ್ದು, ಎರಡು ಬಾರಿ ಚಾಂಪಿಯನ್‌ಶಿಪ್ ಗೆದ್ದು ಬೀಗಿದೆ. ತಂಡವನ್ನು ಕಡಿಮೆ ಬಜೆಟ್‌ನಲ್ಲಿ ಪ್ರಾರಂಭಿಸಿ ಬಿಗ್‌ ಪ್ರಾಫಿಟ್‌ ಪಡೆದುಕೊಂಡಿದ್ದ ಅಭಿಷೇಕ್, ಲಾಭದ ಬಗ್ಗೆ ಮಾಧ್ಯಮಗಳಿಗೆ ನಿಖರವಾದ ಅಂಕಿ ಅಂಶವನ್ನು ನೀಡದಿದ್ದರೂ, ಹೂಡಿಕೆ ಮಾಡಿದ್ದಕ್ಕಿಂತ 100 ಪಟ್ಟು ಆದಾಯ ಬಂದಿದೆ ಎಂಬುವುದಾಗಿ ಇವರು ಹಿಂದೊಮ್ಮೆ ಹೇಳಿದ್ದರು.

ಇನ್ನೊಂದು ಕ್ರೀಡಾ ಹೂಡಿಕೆ ಎಂದರೆ ಚೆನ್ನೈಯನ್ ಎಫ್‌ಸಿ ಎಂಬ ಫುಟ್‌ಬಾಲ್ ತಂಡ, ಮತ್ತು ಇದು ಕೂಡ ಅಭಿಷೇಕ್‌ಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ. ಕಳೆದ ಋತುವಿನಲ್ಲಿ, ಲೀಗ್ ತನ್ನ 163 ಪಂದ್ಯಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಜನರನ್ನು ನೇರ ಪ್ರೇಕ್ಷಕರನ್ನು ಪಡೆದುಕೊಂಡಿತು. ಇದರಲ್ಲೂ ಬಚ್ಚನ್‌ ಸಾಕಷ್ಟು ಲಾಭ ಗಳಿಸಿದ್ದಾರೆ. ಇದಲ್ಲದೇ ಅಭಿಷೇಕ್ ಬಚ್ಚನ್ ಇತರೆ ಹೂಡಿಕೆಗಳಲ್ಲೂ ಮೇಲುಗೈ ಸಾಧಿಸಿದ್ದಾರೆ.

ಇನ್ನೂ 2025ರ ಹುರುನ್ ಶ್ರೀಮಂತರ ಪಟ್ಟಿ ಪ್ರಕಾರ, ತಂದೆ ಅಮಿತಾಬ್ ಬಚ್ಚನ್ ನೇತೃತ್ವದ ಅಭಿಷೇಕ್ ಮತ್ತು ಅವರ ಕುಟುಂಬದ ಮೌಲ್ಯ 1630 ಕೋಟಿ ರೂ.ಗಳಾಗಿದೆ. ಕಳೆದ ಕೆಲವು ದಶಕಗಳಿಂದ ಇವರ ಸಂಪತ್ತು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular