ಮಾವುತ ಹಾಗೂ ಕಾವಾಡಿಗ ಕುಟುಂಬದ ಮಹಿಳೆಯರಿಗ ಬಾಗಿನ ವಿತರಣೆ
ಮೈಸೂರು: ದಸರಾ ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಅರಿಶಿನ ಕುಂಕುಮ, ವಿಳೆದೆಲೆ, ಬಾಳೆಹಣ್ಣು, ಹಾಗೂ ತೆಂಗಿನಕಾಯಿ, ಸೀರೆ ವಿತರಿಸುವ ಮೂಲಕ ಬಾಗಿನ ನೀಡಿದ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಡಾಕ್ಟರ್ ಎಂ ಶಾಂತ ರಾಮಕೃಷ್ಣ ಅಭಿಮಾನಿ ಬಳಗ ಸದಸ್ಯರುಗಳು ಬಳಿಕ ಮಾತನಾಡಿದ ಕರ್ನಾಟಕ ಸರ್ಕಾರದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಬಿ. ಪುಷ್ಪ ಅಮರನಾಥ್ ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ದಸರಾ ಮಹೋತ್ಸವ ಸಹಕಾರಿ ಯಾಗಲಿದೆ. ಆ ಮೂಲಕ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲುಪಿಸುವುದೇ ಈ ಉತ್ಸವದ ಉದ್ದೇಶವಾಗಿದೆ ಎಂದರು.
ನಂತರ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ನವರಾತ್ರಿಯ ಮೂಲಕ ಪ್ರಕೃತಿಗೆ ನಮಿಸಿ, ಪ್ರಕೃತಿಯ ಶಕ್ತಿ ತಾಯಿ ದುರ್ಗಾಮಾತೆಯನ್ನು ಸರ್ವ ಸ್ತ್ರೀಯರೆಲ್ಲರೂ ಕಾಣುವುದೇ ನವರಾತ್ರಿ,
ನವರಾತ್ರಿಗೆ ಅಪಾರ ಶಕ್ತಿ ಇದ್ದು 9 ದಿನಗಳ ಕಾಲ ಆಂತರಿಕ ದ್ವೇಷ, ಅಸೂಯೆ ತೊಳಗಿಸಿ ದೇವಿ ಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನವರಾತ್ರಿಯ ವಿಶೇಷತೆ ಎಂದರು
ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ವನ್ಯಜೀವಿ ವಿಭಾಗದ ಡಿ ಸಿ ಎಫ್ ಡಾಕ್ಟರ್ ಐ ಬಿ ಪ್ರಭುಗೌಡ, ಸಮಾಜ ಸೇವಕರಾದ ಡಾಕ್ಟರ್ ಎಂ ಶಾಂತ ರಾಮಕೃಷ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ನಾಗಮಣಿ ಜೆ, ದರ್ಶನ್,ರೇಣುಕಾ ಹೊರಕೇರಿ,ಸವಿತಾ ಘಾಟ್ಕೆ,ಸಂತೋಷ್ ಕಿರಾಳು, ಶಾರದಾ, ಹಾಗೂ ಇನ್ನಿತರರು ಹಾಜರಿದ್ದರು.