ಮೈಸೂರು : ನಗರದ ಜನಸ್ಪಂದನ ಟ್ರಸ್ಟ್‌ನಿಂದ ‘ಕರ್ನಾಟಕದ ಅಪರೂಪದ ಜನ ನಾಯಕನಿಗೆ ಜನಪರತೆಯೇ ದ್ವೇಷವಾಯಿತೆ’ ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಮೈಸೂರು ಜೆಪಿ ನಗರ ಮುಖ್ಯರಸ್ತೆ, ತ್ರಿಪುರ ಸುಂದರಿ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮೈಬಿಲ್ಡ್ ಸಭಾಂಗಣದಲ್ಲಿ ಇಂದು ಆ,೭ ರಂದು ಸಂಜೆ ೪.೩೦ ಕ್ಕೆ ವಿಚಾರ ಸಂಕಿರಣ ಪ್ರಾರಂಭವಾಗಲಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಈ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಲಿದ್ದು, ಮುಖ್ಯ ಭಾಷಣಕಾರರಾಗಿ ಸಚಿವರಾದ ಸಂತೋಷ್ ಲಾಡ್, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಕೆಪಿಸಿಸಿ ವಕ್ತಾರ ರಮೇಶ್ ಬಾಬು, ನಿಕೇತ್ ರಾಜ್ ಮೌರ್ಯ ಆಗಮಿಸಿಲಿದ್ದಾರೆ.
ಈ ಸಮಾರಂಭವನ್ನು ಆಯೋಜಿಸಿರುವ ಮಾಜಿ ಶಾಸಕರದ ಎಂ.ಕೆ.ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.