Friday, April 18, 2025
Google search engine

Homeರಾಜ್ಯಇಡಿ ಇರೋದು ವಿರೋಧ ಪಕ್ಷದ ನಾಯಕರನ್ನು ಬ್ಲ್ಯಾಕ್ ಮೆಲ್ ಮಾಡೋಕೆ : ಸಚಿವ ದಿನೇಶ್ ಗುಂಡೂರಾವ್

ಇಡಿ ಇರೋದು ವಿರೋಧ ಪಕ್ಷದ ನಾಯಕರನ್ನು ಬ್ಲ್ಯಾಕ್ ಮೆಲ್ ಮಾಡೋಕೆ : ಸಚಿವ ದಿನೇಶ್ ಗುಂಡೂರಾವ್

ಮಂಗಳೂರು : ಜಾರಿ ನಿರ್ದೇಶನಾಲಯ (ಇಡಿ) ಇರೋದು ದೇಶದಲ್ಲಿ ವಿರೋಧ ಪಕ್ಷದ ನಾಯಕರನ್ನು ಬ್ಲಾಕ್ಮೇಲ್ ಮಾಡುವುದಕ್ಕೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದು, ಇಡಿ ಇರುವುದು ಭ್ರಷ್ಟಾಚಾರದ ವಿರುದ್ಧ ಅಲ್ಲ ಅದು ಬಿಜೆಪಿಯ ಅಂಗ ಸಂಸ್ಥೆ. ವಿರೋಧಪಕ್ಷದ ನಾಯಕರನ್ನು ಮಟ್ಟ ಹಾಕುವುದಕ್ಕಾಗಿ ಇಡಿ ಇದೆ. ಅದೊಂದು ಪೊಲಿಟಿಕಲ್ ಏಜೆನ್ಸಿ ಅದಕ್ಕೆ ಯಾವುದೇ ನೈತಿಕತೆ ಉಳಿದಿಲ್ಲ ಎಂದು ದಿನೇಶ್ ಗುಂಡೂರಾವ್ ಕಿಡಿ ಕಾರಿದರು.

ಇಡಿ ಉದ್ದೇಶವೇ ಇವತ್ತು ಸರಿಯಿಲ್ಲ. ದೇಶದಲ್ಲಿ ಅದು ನಂಬಿಕೆ ಕಳೆದುಕೊಂಡಿದೆ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಇಡಿ ಅವರ ಕೆಲಸವಾಗಿದೆ. ಅಪಪ್ರಚಾರ, ಹೆದರಿಸುವುದು ಮತ್ತು ನಾಯಕರ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಇಡಿ ಇರುವುದು ವಿರೋಧ ಪಕ್ಷದವರನ್ನು ಬ್ಲಾಕ್ಮೇಲ್ ಮಾಡೋಕೆ ಎಂದು ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular