ವರದಿ: ಎನ್ ಪ್ರಸನ್ನ , ಮಂಡ್ಯ
ಮದ್ದೂರು: ಈಗಾಗ್ಲೇ ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗ್ಲೇ ಸರ್ಕಾರ ಗಣೇಶ ಕೂರಿಸಲು ಸಾಕಷ್ಟು ನಿರ್ಬಂಧ ವಿಧಿಸಿದೆ. ಪಿಒಪಿ ಗಣೇಶಗಳಿಗೆ ಬ್ರೇಕ್ ಹಾಕಿದ್ದು, ಪರಿಸರ ಸ್ನೇಹಿ ಗಣೇಶ ಕೂರಿಸಲು ಸೂಚಿಸಿದೆ. ಮದ್ದೂರಿನ ಈ ವ್ಯಕ್ತಿ ಪರಿಸರ ಸ್ನೇಹಿ ಗಣೇಶ ತಯಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ವಿವಿಧ ಭಂಗಿಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿ
ಯೆಸ್ ನೀವೂ ನೋಡ್ತಿರುವ ವಿವಿಧ ಭಂಗಿಯ ಗಣೇಶ.ಗಣೇಶ ಮೂರ್ತಿ ತಯಾರಿಯಲ್ಲಿ ಮಗ್ನರಾದ ವ್ಯಕ್ತಿ. ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ. ಈ ವ್ಯಕ್ತಿ ಹೆಸರು ವಿಜಯ್ ವಿಶ್ವಕರ್ಮ ಪರಿಸರ ಗಣೇಶ ತಯಾರಿಕೆಯಲ್ಲಿ ಎತ್ತಿದ ಕೈ. ಗೌರಿ ಗಣೇಶ ಹಬ್ಬದ ಹಿನ್ನಲೆ ಸಾವಿರಾರು ಗೌರಿ, ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಹಬ್ಬ ಇನ್ನೂ ಆರು ತಿಂಗಳು ಮುಂಚೆಯೇ ಗಣೇಶ ತಯಾರಿಕೆಯಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಅಕ್ಕಪಕ್ಕದ ಗ್ರಾಮದ ಯುವಕರಿಗೆ ವಿಜಯ್ ನಿರ್ಮಿಸುವ ಮೂರ್ತಿಗಳೆಂದರೆ ಅಚ್ಚುಮೆಚ್ಚಾಗಿದೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರುತ್ತಿದ್ದಾರೆ.

ಮೈಸೂರು,ಬೆಂಗಳೂರು, ಚಾಮರಾಜನಗರಕ್ಕೂ ಗಣೇಶ ರಫ್ತು!.
ಇನ್ನೂ ಇವರು ತಯಾರಿಸುವ ಗಣೇಶ ಮೂರ್ತಿಗಳಿಗೆ ಮಂಡ್ಯ ಅಷ್ಟೇ ಅಲ್ಲದೇ ಮೈಸೂರು, ಬೆಂಗಳೂರು, ಚಾಮರಾಜನಗರ ದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಬೇಕಾದ ಗಣೇಶ ಮೂರ್ತಿಗಳಿಗೆ ಮೊದಲೇ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿರುತ್ತಾರೆ. ಕೊರೋನಾ ಬಳಿಕ ನಮ್ಮ ಬದುಕು ಕೂಡ ಸುಧಾರಿಸಿದೆ ಅನ್ನೋ ವಿಶ್ವಾಸದ ಮಾತುಗಳನ್ನು ಹೇಳುತ್ತಾರೆ.

ಒಟ್ನಲ್ಲಿ ಗಣೇಶ ಬಪ್ಪಾ ಮೊರೆಯಾ ಎಂಬಂತೆ ಹಬ್ಬಕ್ಕೆ ದಿನಗಣನೆ ಇರುವ ಹೊತ್ತಲ್ಲೇ ಗಣೇಶ ಮೂರ್ತಿಗಳು ಕೂಡ ಸೇಲ್ ಆಗ್ತಿದ್ದು, ಪಿಒಪಿ ಗಣೇಶಗಳಿಗೆ ಗುಡ್ ಬೈ ಹೇಳಿ ಪರಿಸರ ಸ್ನೇಹಿ ಗಣೇಶ ಖರೀದಿಗೆ ಯುವಕರು ಕೂಡ ಮುಂದಾಗುತ್ತಿರುವುದು ಸಂತಸದ ಸಂಗತಿಯಾಗಿದೆ.