ಮಂಡ್ಯ: ನಾಗಮಂಗಲ ತಾಲ್ಲೂಕಿನ ಹೊನ್ನಾವರ ಗ್ರಾಮದಲ್ಲಿರುವ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದು ನಿಂತ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಿಂತ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಸಮನಾಗಿ ಚಿಕಿತ್ಸಾ ಸೌಲಭ್ಯ ನೀಡುತ್ತಿರುವ, ಹಳ್ಳಿಗಾಡಿನ ಆಸ್ಪತ್ರೆಗೆ ಹೈಟೆಕ್ ಸ್ವರ್ಶ ನೀಡಿದ ಸರ್ಕಾರಿ ವೈದ್ಯ. ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನ ತೋರಿಸಿ ಕೊಟ್ಟ ಡಾ.ಟಿಪ್ಪು ಸುಲ್ತಾನ್.

ಸರ್ಕಾರಿ ಆಸ್ಪತ್ರೆ ಅಂದ್ರೆ ಸಾಕು ಜನರು ನೋಡುವ ದೃಷ್ಟಿಯೇ ಬೇರೆ: ತೀರಾ ಬಡವರು-ಅನಿವಾರ್ಯದ ಸ್ಥಿತಿಯಲ್ಲಿದ್ದವರು ಮಾತ್ರ ಸರ್ಕಾರಿ ಆಸ್ಪತ್ರೆ ಕಡೆ ಹೋಗೋದು ಸಾಮಾನ್ಯ, ಆದ್ರೆ ಯಾವುದಕ್ಕೂ ಕಮ್ಮಿ ಇಲ್ಲ ಅನ್ನೊ ರೀತಿ ಹೈಟೆಕ್ ಆಗಿದೆ ಈ ಸರ್ಕಾರಿ ಆಸ್ಪತ್ರೆ.
ಡಾ.ಟಿಪ್ಪು ಸುಲ್ತಾನ್, ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೊವಿಡ್ ವೇಳೆ ಈ ಆಸ್ಪತ್ರೆಗೆ ನೇಮಕಗೊಂಡಿರು
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಚತೆ, ಶುಚಿತ್ವದಿಂದ ಕೂಡಿದ ಬೆಡ್, ಸುಸಜ್ಜಿತ ಔಷಧ ವಿಭಾಗ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡ್ತಿರೋ ವೈದ್ಯರು, ಆಸ್ಪತ್ರೆಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಬಂದಿದ್ದಾರೆ.

ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಒತ್ತು ಕೊಟ್ಟು ಅನುದಾನ ತಂದು ಅಭಿವೃದ್ಧಿಪಡಿಸಿದ ವೈದ್ಯ ಡಾ.ಟಿಪ್ಪು ಸುಲ್ತಾನ್. ರೋಗಿಗಳಿಗೆ ಅಗತ್ಯವಿರುವ ಔಷಧಗಳನ್ನ ತರಿಸಿ ಸ್ಥಳದಲ್ಲೇ ಕೊಡುವ ವೈದ್ಯ. ಹತ್ತಾರು ಹಳ್ಳಿಗಳಿಗೆ ಸಂಜೀವಿನಿಯಾದ ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರ.
ಸುತ್ತಮುತ್ತಲಿನ ಹಳ್ಳಿಜನರ ಮೆಚ್ಚುಗೆ ಪಡೆದ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯ, ಮತ್ತಷ್ಟು ಅಭಿವೃದ್ಧಿ ಮಾಡುವ ಕನಸು ಇಟ್ಟುಕೊಂಡಿರುವ ಡಾ.ಟಿಪ್ಪುಸುಲ್ತಾನ್, ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಿರಿಯ ಅಧಿಕಾರಿಗಳು, ಸ್ಥಳೀಯರು ಮೆಚ್ಚುಗೆ, ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.

