ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದೇಶದಲ್ಲಿ ಎನ್ ಡಿ ಎ ಮತ್ತೆ ಅಧಿಕಾರಕ್ಕೆ ಬರಲಿದ್ದು,ಈ ಬಾರಿ 350ಕ್ಕೂ ಅಧಿಕ ಸೀಟುಗಳನ್ನು ಗಳಿಸಲಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ,ಖ್ಯಾತ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದ್ದಾರೆ. ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯ ಮುಡಾ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್.ಎನ್. ವಿಜಯ್ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ಮತಯಾಚಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಹೇಳಿದರು. ಮತಕ್ಕಾಗಿ ದೇಶದಲ್ಲಿ ಎಲ್ಲಾ ಪಕ್ಷಗಳು ಉಚಿತ ಸೌಲಭ್ಯಗಳ ಘೋಷಣೆ ತರವಲ್ಲ.ಉದ್ಯೋಗ ಸೃಷ್ಟಿ ಮಾಡಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸರ್ಕಾರಗಳು ಮುಂದಾಗಬೇಕು.ಉಚಿತ ಯೋಜನೆಗಳು(ಪ್ರೀಬೀಸ್) ರಾಜ್ಯ,ದೇಶವನ್ನು ದಿವಾಳಿ ಮಾಡಲಿವೆ.ವೆನಿಜುಯೆಲಾ ದೇಶ ಉಚಿತ ಸೌಲಭ್ಯಗಳನ್ನು ಕೊಟ್ಟು ಸಂಪೂರ್ಣ ದಿವಾಳಿಯಾಗಿದೆ ಎಂದರು.
ಬಡಜನರು,ಸಮಾಜದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ,ಮುಖ್ಯಮಂತ್ರಿಯಾಗಿ ಮಾದರಿ ಆಡಳಿತ ನೀಡಿದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹೆಚ್ಚು ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು. ವಿಜಯ್ ಅವರಿಗೆ ಉತ್ತಮ ಭವಿಷ್ಯ:ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ಹೆಚ್.ಎನ್.ವಿಜಯ್ ಅವರು ಸಜ್ಜನ ರಾಜಕಾರಣಿ.ಕೊಡುಗೈ ದಾನಿ ವಿಜಯ್ ಅಂಥವರು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿದರೆ ಸಮಾಜಕ್ಕೆ ಒಳಿತಾಗಲಿದೆ.ವಿಜಯ್ ಅವರು ಶಾಸಕರಾಗುವ ಎಲ್ಲಾ ಅರ್ಹತೆ ಹೊಂದಿದ್ದು,ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮೈಮಲ್ ಮಾಜಿ ಅಧ್ಯಕ್ಷ ಅಂಕನಹಳ್ಳಿ ಸೋಮಶೇಖರ್, ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ,ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಮಧುಚಂದ್ರ,ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ,ಜೆಡಿಎಸ್ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ, ಮುಖಂಡರಾದ ಮಿರ್ಲೆ ರಾಜೀವ್,ಉಪ್ಪಾರ ಸಮಾಜದ ಮುಖಂಡರಾದ ಎಲ್ ಐಸಿ ನಿಂಗೇಗೌಡ ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ತಾ.ಕಸಾಪ ಅಧ್ಯಕ್ಷ ಮಧುಚಂದ್ರ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ರಾಮೇಗೌಡ, ಜೆಡಿಎಸ್ ಮುಖಂಡರಾದ ಮಿರ್ಲೆ ರಾಜೀವ್, ರಾಜೇಶ್, ನಿಂಗಪ್ಪ, ಅನಂತ್, ಮುದುಗುಪ್ಪೆ ಕುಮಾರ್, ಸತೀಶ್, ಕೃಷ್ಣೇಗೌಡ, ರವಿ, ಅಂಕನಹಳ್ಳಿಶಿವಣ್ಣ, ಮಹೇಶ್, ಗೊಪಾಲ್, ಮೈಸೂರುಚಂದ್ರಣ್ಣ ಪ್ರದೀಪ್, ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು.