Saturday, April 19, 2025
Google search engine

Homeಅಪರಾಧಕೇಜ್ರಿವಾಲ್‌ಗೆ ಬೆದರಿಕೆ ಬರಹ: ದೆಹಲಿಯಲ್ಲಿ ಯುವಕನ ಬಂಧನ

ಕೇಜ್ರಿವಾಲ್‌ಗೆ ಬೆದರಿಕೆ ಬರಹ: ದೆಹಲಿಯಲ್ಲಿ ಯುವಕನ ಬಂಧನ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವಂತಹ ಬರಹಗಳನ್ನು ಮೆಟ್ರೊ ರೈಲುಗಳಲ್ಲಿ ಬರೆಯುತ್ತಿದ್ದ ಯುವಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ೩೩ ವರ್ಷದ ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದೆ. ಮೆಟ್ರೊ ರೈಲುಗಳ ಕೋಚ್‌ಗಳು ಹಾಗೂ ಸೈನ್‌ಬೋರ್ಡ್‌ಗಳಲ್ಲಿ ಗೀಚುತ್ತಿದ್ದ ಯುವಕನ ದೃಶ್ಯಗಳು ಸಿಸಿಟಿವಿ ವಿಡಿಯೊದಲ್ಲಿ ಕಂಡುಬಂದಿದ್ದವು. ಅಂಕಿತ್ ಗೋಯಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೀಚುಬರಹಗಳ ಫೋಟೊಗಳನ್ನು ಹಂಚಿಕೊಂಡಿದ್ದ. ಆತನೇ ಗೀಚುಬರಹ ಬರೆದಿರಬಹುದೆಂದು ಪೊಲೀಸರು ಶಂಕಿಸಿದ್ದರು. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.

RELATED ARTICLES
- Advertisment -
Google search engine

Most Popular