ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕಿನ 12 ಗ್ರಾಮ ಪಂಚಾಯತಿಗಳಿಗೆ ಸಂಬಂಧಪಟ್ಟ ಒಟ್ಟು 55 ಮಹಿಳೆಯರಿಗೆ ಪೀಪಲ್ ಟ್ರೀ ಸಂಸ್ಥೆ ವತಿಯಿಂದ ಸಣ್ಣ ಮತ್ತು ಅತಿ ಸಣ್ಣ ಸಿರಿಧಾನ್ಯ ಸಹೋದರಿಯರನ್ಙು ಕೃಷಿ ಅದ್ಯಯನ ಕೇಂದ್ರ ತಿಪಟೂರು ತಾಲ್ಲೂಕಿನ ಅಕ್ಷಯಕಲ್ಪಗೆ ಭೇಟಿ ನೀಡಿ ಜೇನುಸಾಕಾಣಿಕೆ ಮಥು ನಿರ್ವಹಣೆ ಏರು ಮಡಿಯಲ್ಲಿ ವೈವಿದ್ಯಮಯ ತರಕಾರಿಗಳು ಮಥತು ಅವುಗಳ ನಿರ್ವಹಣೆ ಜಾನುವಾರಗಳ ರಸ ಮೇವು, ಅದನ್ನು ತಯಾರಿಸುವ ವಿದಾನ ಮತ್ತು ಹಾಲಿನ ಉತ್ತನ್ನಗಳ ತಯಾರಿಕೆ ಜೊತೆಗೆ ಗಾಣದ ಮೂಲಕ ಕೊಬ್ಬರಿ ಎಣ್ಣೆ ತಯಾರಿಕೆಗಳ ಮಾಹಿತಿ ಪಡೆದರು.

ನಂತರ ಮರು ದಿವಸ ಗಾಂಧಿ ಸಹಜ ಬೇಸಾಯ ಶಾಲೆ ತುಮಕೂರು ಇಲ್ಲಿಗೆ ಬೇಟಿ ಮಾಡಿ ಒಟ್ಟು 5 ಎಕರೆ ವಿಸ್ತೀರ್ಣ ದಲ್ಲಿ ಸಾವಯವ ಪದ್ದತಿಯಲ್ಲಿ ಮಳೆ ಆಶ್ರಿತ ಕೃಷಿ ಬೇಸಾಯ, ತೋಟಾಗಾರಿಕ ಬೆಳೆಗಳ ಜೋಡಣೆ, ಅರಣ್ಯ ಅದಾರಿತ ಮರಗಿಡಗಳ ವಿನ್ಯಾಸ ಗಳ ಕುರಿತಂತೆ ಅಲ್ಲಿನ ಮಾಹಿತಿ ಕೇಂದ್ರದ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.

ತರಬೇತಿ ಪಡೆದ ನಂತರ ಮಹಿಳೆಯರು ನಮ್ಮನ್ನು ಇಲ್ಲಿಗೆ ಕರೆತಂದು ತರಬೇತಿ ನೀಡಿ ನಮಗೆ ಸವಲಂಬಿಗಳಾಗಿ ಬದುಕುವುದು ಹೇಗೆ ಮತ್ತು ಮಹಿಳೆಯರು ಅಡುಗೆ ಮನೆಗೆ ಸೀಮಿತರಲ್ಲ ಎಂಬುದನ್ನು ನಮಗೆ ತೋರಿಸಿಕೊಟ್ಟ ಪೀಪಲ್ ಟ್ರೀ ಸಂಸ್ಥೆಯ ಮುಖ್ಯಸ್ಥರಿಗೆ ಮತ್ತು ಸಿಬ್ಬಂದಿಗಳಿಗೆ ಧನ್ಯವಾದವನ್ನು ಹೇಳಿದರ ಜೊತೆಗೆ ಮಹಿಳೆಯರು ಅಭಿನಂದನೆ ಸಲ್ಲಿಸಿದರು.
ಅಧ್ಯಯನ ಪ್ರವಾಸದಲ್ಲಿ ಪೀಪಲ್ ಟ್ರೀ ಸಂಸ್ಥೆಯ ಚನ್ನಕೇಶವ, ರುದ್ರಪ್ಪ, ಸುರೇಶ್, ಲತಾ, ಜವರೇಗೌಡ ಭಾಗವಹಿಸಿದ್ದರು.