ಶಿವಮೊಗ್ಗ: ಚೇಸ್ ಮಾಡಲು ಹೋಗಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಸಿದ್ದಯ್ಯ ರೋಡ್ ಸರ್ಕಲ್ ಬಳಿ ನಡೆದಿದೆ. ಮೃತ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ.
ಹೊಸ ವರ್ಷದ ಮತ್ತಿನಲ್ಲಿ ಕಾರಿಗೆ ಕಲ್ಲು ಹೊಡೆದು ಬೈಕ್ ಸವಾರ ಪರಾರಿಯಾಗುತ್ತಿದ್ದ. ಇದರಿಂದ ಸಿಟ್ಟಗೆದ್ದ ಕಾರು ಚಾಲಕ ಬೈಕ್ ಚೇಸ್ ಮಾಡಿಕೊಂಡು ಬಂದಿದ್ದ. ಈ ವೇಳೆ ಗಾಯತ್ರಿ ಶಾಲೆ ಬಳಿ ಹಂಪ್ ಕಾಣದೆ ಇಬ್ಬರು ಸವಾರರು ಕಾರು ಮತ್ತು ಬೈಕ್‌ನ್ನು ಹಾರಿಸಿದ್ದರು. ಈ ಹಿನ್ನೆಲೆ ಕಾರು ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರಿನಲ್ಲಿದ್ದ ಇಬ್ಬರು ಹುಡುಗಿಯರು ಪಾರಾಗಿದ್ದಾರೆ. ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೋವಾ ಪಲ್ಟಿಯಾಗಿ ಇಬ್ಬರು ದುರ್ಮರಣ: ಇನ್ನೋವಾ ಕಾರು ಪಲ್ಟಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಮಾಗಡಿಯ ತಾವರೆಕೆರೆ ರಸ್ತೆಯ ಜನತಾ ಕಾಲೋನಿ ಬಳಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಮಂಜು (೩೧) ಹಾಗೂ ಕಿರಣ್ (೩೦) ಎಂದು ಗುರುತಿಸಲಾಗಿದೆ. ಕಾರಲ್ಲಿ ೮ ಜನ ಸ್ನೇಹಿತರು ಹೊಸ ವರ್ಷದ ಪಾರ್ಟಿ ಮೂಡಲ್ಲಿ ಮುಂಜಾನೆ ೩ ಗಂಟೆಗೆ ಟೀ ಕುಡಿಯೋಕೆ ಬೆಂಗಳೂರಿಂದ ಮಾಗಡಿಗೆ ಬಂದಿದ್ದರು. ಟೀ ಕುಡಿದು ವಾಪಾಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ೬ ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.