ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಪರಾಧ ಚಟುವಟಿಕೆಗಳ ತಾಣವಾಗಿದೆ. ರಾಬರಿ, ದರೋಡೆ ಕೇಸಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಪೊಲೀಸರು ನಿವೃತ್ತ ಎಸಿಪಿಯಿಂದ ಚಿನ್ನಾಭರಣ ದೋಚಿದ್ದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ನಿವೃತ್ತ ಎಸಿಪಿ ಸುಬ್ಬಣ್ಣ ಮಾರ್ನಿಂಗ್ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಾಸ್ಕ್ ಧರಿಸಿದ್ದ ಇಬ್ಬರು ಆಗಂತುಕರು ಸುಬ್ಬಣ್ಣ ಮೇಲೆ ದಾಳಿ ಮಾಡಿ ಗೋಲ್ಡ್ ದೋಚಿ ಎಸ್ಕೇಪ್ ಆಗಿದ್ದರು. ಚಾಕು ತೋರಿಸಿ ಕತ್ತಿನಲ್ಲಿದ್ದ ಸರ ಕಸಿದುಕೊಂಡಿದ್ದರು. ಪೊಲೀಸ್ ಕಂಪ್ಲೇಂಟ್ ದಾಖಲಿಸಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಸಂಜಯ್ ನಗರ ಪೊಲೀಸರಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸರು ಡಿಜೆ ಹಳ್ಳಿಯ ಮೂವರು ರಾಬರ್ಸ್ಗಳನ್ನ ಅರೆಸ್ಟ್ ಮಾಡಿದ್ದಾರೆ. ಕದ್ದಿದ್ದ ಚಿನ್ನಾಭಾರಣ ಎಲ್ಲಿ ಮಾರಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಬಂಧಿತರನ್ನು ಮೊಹಮ್ಮದ್ ಸಲ್ಮಾನ್, ಮೋಸೀನ್, ಮೊಹಮ್ಮದ್ ಇರ್ಫಾನ್ ಬಂಧಿತರು. ಒಂದೇ ಏರಿಯಾದ ಈ ಮೂವರಲ್ಲಿ ಮೋಸಿನ್ ಮತ್ತು ಇರ್ಫಾನ್ ರಾಬರಿ ಮಾಡಿದರೆ, ಸಲ್ಮಾನ್ ತಾನು ಕದ್ದ ಬೈಕ್ನಲ್ಲಿ ಇನ್ನಿಬ್ಬರಿಗೆ ಸಹಾಯ ಮಾಡಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮೂರು ಜನರನ್ನ ಬಂಧಿಸಿರುವ ಸಂಜಯ್ ನಗರ ಪೊಲೀಸರು ಆರೋಪಿಗಳನ್ನ ಜೈಲಿಟ್ಟಿದ್ದಾರೆ.
ನಿವೃತ್ತ ಎಸಿಪಿ ಸುಬ್ಬಣ್ಣ ಕೈಗೆ ಚಾಕುವಿನಿಂದ ಹಲ್ಲೆ ಕೂಡ ಮಾಡಿದ್ದಾರೆ. ಬಳಿಕ ಕೈಯಲ್ಲಿದ್ದ ಚಿನ್ನದ ಬ್ರೇಸ್ ಲೇಟ್ ಕಿತ್ಕೊಂಡು ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದರು. ಈ ಘಟನೆಯಿಂದ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದರು.