ವರದಿ: ಎಡತೊರೆ ಮಹೇಶ್
ಹೆಚ್.ಡಿ. ಕೋಟೆ: ತಾಲ್ಲೂಕಿನ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಹೈರಿಗೆ ಗ್ರಾಮದಲ್ಲಿ 3 ಸಂಶಯಾಸ್ಪದ ಭೇದಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಈ ದಿನ ಇಓ ಧರಣೇಶ್ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್, ಎಇಇ ಗೋವಿಂದ ನಾಯ್ಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಚಂದ್ರ ಕಲಾ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಮತ್ತು ತಂಡದವರು ಹೈರಿಗೆ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿ, ಮೇಲ್ವಿಚಾರಣೆ ನಡೆಸಿದರು.

ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರ ತಂಡ ವನ್ನು ರಚಿಸಿ, ಗ್ರಾಮದ ಎಲ್ಲಾ ಮನೆಗಳ ಸಮೀಕ್ಷೆ ಮಾಡಲಾಯಿತು, ಊರಿನ ಎಲ್ಲಾ ಪ್ರಮುಖ ಬೀದಿಗಳಲ್ಲಿ ಪರಿಶೀಲಿಸಿ, ಓವರ್ ಹೆಡ್ ಟ್ಯಾಂಕ್ ನ್ನೂ ಸ್ವಚ್ಛಗೊಳಿಸುತ್ತಿರುವುದನ್ನು ಪರಿಶೀಲಿಸಲಾಯಿತು.
ಊರಿನ ಸುತ್ತ ಮುತ್ತ ಅಳವಡಿಸಿರುವ ಪೈಪ್‌ಗಳನ್ನು ಪರಿಶೀಸಿದಾಗ ಎಲ್ಲಾ ಸುಸ್ಥಿತಿಯಲ್ಲಿ ಇರುವುದು ಕಂಡುಬಂದಿರುತ್ತದೆ. ಮತ್ತು ಕುಡಿಯುವ ನೀರನ್ನು ಪರೀಕ್ಷೆ ಗೆ ಕಳುಹಿಸಿದಾಗ ನೀರು ಕುಡಿಯಲು ಯೋಗ್ಯವಾಗಿದೆ ಎಂದು ವರದಿ ಬಂದಿರುತ್ತದೆ.

ಒಟ್ಟಾರೆ ಗ್ರಾಮದಲ್ಲಿ ಎಲ್ಲರೂ ಆರೋಗ್ಯದಿಂದ ಇದ್ದಾರೆ ಮತ್ತು ಹೈರಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ಇಓ ರವರ ಸಮ್ಮುಖದಲ್ಲಿ ಸಭೆಯನ್ನು ನಡೆಸಿ ಜನರಿಗೆ ಶುದ್ಧ ಆಹಾರವನ್ನು ಸೇವಿಸುವಂತೆ ಮತ್ತು ನೀರನ್ನು ಚೆನ್ನಾಗಿ ಕಾಯಿಸಿ ಕುದಿಸಿ ಕುಡಿಯಲು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ .ಜಯ,ನಾಗರಾಜು, ಸದಸ್ಯರಾದ ದಿನೇಶ್ ,ಶಿವಣ್ಣ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ರಾಮಚಂದ್ರ,ರವಿರಾಜ್ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ದೊರೆ, ಶಶಿರೇಖಾ ಶೀಲಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜು , ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು,ಇನ್ನಿತರರು ಹಾಜರಿದ್ದರು.