Sunday, April 20, 2025
Google search engine

Homeಅಪರಾಧಕಾನೂನುಕೆಎಸ್ ​ಆರ್ ​ಟಿಸಿ ಬಸ್ ನಲ್ಲಿ ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಲ್ಲಿ 6.54 ಲಕ್ಷ...

ಕೆಎಸ್ ​ಆರ್ ​ಟಿಸಿ ಬಸ್ ನಲ್ಲಿ ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಲ್ಲಿ 6.54 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೇ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ ಪ್ರಯಾಣಿಕರಿಂದ ರಾಜ್ಯಾದ್ಯಂತ 6.54 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ.

ನಿಗಮವು ಆದಾಯ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ್ದು, ಕಣ್ಗಾವಲನ್ನೂ ಹೆಚ್ಚಿಸಿದೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಸಂಚರಿಸುವ 42,680 ಬಸ್‌ ಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ತಪಾಸಣೆ ವೇಳೆ 3,708 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 3,754 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಸಿಬ್ಬಂದಿಗೆ 88,429 ರೂ. ದಂಡ ವಿಧಿಸಲಾಗಿದೆ ಎಂದು ಕೆಎಸ್​ ಆರ್ ​ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವಿಭಾಗೀಯ ಮತ್ತು ಕೇಂದ್ರೀಯ ಅಧಿಕಾರಿಗಳ ಮೂಲಕ ಪ್ರತಿದಿನ ಟಿಕೆಟ್ ರಹಿತ ಪ್ರಯಾಣಿಕರ ಮೇಲೆ ನಿಗಾ ಇಡುವುದಾಗಿ ಕೆಎಸ್‌ ಆರ್‌ ಟಿಸಿ ತಿಳಿಸಿದೆ. ಇದೀಗ ಟಿಕೆಟ್​ ರಹಿತ ಪ್ರಯಾಣಿಕರ ವಿರುದ್ಧದ ಕಾರ್ಯಾಚರಣೆ, ದಂಡ ಸಂಗ್ರಹದಿಂದ ಕೆಎಸ್​ಆರ್​ಟಿಸಿ ಖಜಾನೆಗೆ ಲಕ್ಷಾಂತರ ರೂ. ಸೇರ್ಪಡೆಯಾದಂತಾಗಿದೆ.

ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ / ಪಾಸ್ ಪಡೆದು ಪ್ರಯಾಣ ಮಾಡುವಂತೆ ನಿಗಮವು ಪ್ರಯಾಣಿಕರಲ್ಲಿ ಮನವಿ ಮಾಡಿದೆ.

RELATED ARTICLES
- Advertisment -
Google search engine

Most Popular