ನವದೆಹಲಿ: ಲೋಕಸಭೆ ಚುನಾವಣೆಗೆ ತಮಿಳುನಾಡಿನ ಒಂಬತ್ತು ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಮೂರನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಗುರುವಾರ ಬಿಡುಗಡೆ ಮಾಡಿದೆ. ಇತ್ತೀಚೆಗೆ ತೆಲಂಗಾಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದ ತಮಿಳಿಸೈ ಸೌಂದರರಾಜನ್ ಅವರನ್ನು ಚೆನ್ನೈ ದಕ್ಷಿಣದಿಂದ ಕಣಕ್ಕಿಳಿಸಲಾಗಿದೆ. ಇನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಕೊಯಮತ್ತೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಚೆನ್ನೈ ಸೆಂಟ್ರಲ್‌ನಿಂದ ವಿನೋಜ್ ಪಿ ಸೆಲ್ವಂ, ವೆಲ್ಲೂರಿನಿಂದ ಡಾ. ಎ.ಸಿ. ಷಣ್ಮುಗಂ, ಕೃಷ್ಣಗಿರಿಯಿಂದ ಸಿ. ನರಸಿಂಹನ್, ನೀಲಗಿರಿಯಿಂದ ಡಾ. ಎಲ್ ಮುರುಗನ್(ಎಸ್‌ಸಿ), ಪೆರಂಬಲೂರಿನಿಂದ ಟಿ.ಆರ್. ಪರಿವೇಂದರ್, ತೂತುಕುಡಿಯಿಂದ ನೈನಾರ್ ನಾಗೇಂದ್ರನ್ ಮತ್ತು ಕನ್ಯಾಕುಮಾರಿಯಿಂದ ರಾಧಾಕೃಷ್ಣನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.