Friday, April 11, 2025
Google search engine

Homeಅಪರಾಧಹುಲಿ ದಾಳಿ: 7 ವರ್ಷದ ಬಾಲಕ ಬಲಿ

ಹುಲಿ ದಾಳಿ: 7 ವರ್ಷದ ಬಾಲಕ ಬಲಿ

ಮೈಸೂರು: ಹಾಡ ಹಗಲೇ ಹುಲಿ ದಾಳಿಗೆ 7ವರ್ಷದ ಬಾಲಕ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್‌ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕಲ್ಲಹಟ್ಟಿ ಗ್ರಾಮದ ಚರಣ್ (7) ಮೃತ ಬಾಲಕ. ಜಮೀನಿನಲ್ಲಿ ಮರದ ಕೆಳಗೆ ಕುಳಿತಿದ್ದ ಬಾಲಕನ ಮೇಲೆ ಹುಲಿ ದಾಳಿ ನಡೆಸಿದೆ. ‌ ಚರಣ್ ಪೋಷಕರೊಂದಿಗೆ ತೆರಳಿ  ಜಮೀನಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಕೆಲಸದ ನಡುವೆ ನೋಡಿದಾಗ ಕ್ಷಣದಲ್ಲಿ ಬಾಲಕ ಚರಣ್ ಕಣ್ಮರೆಯಾಗಿದ್ದು ಅಲ್ಲಿದ್ದ ಪೋಷಕರು ಪುತ್ರನಿಗಾಗಿ ಹುಡುಕಾಡಿದ್ದಾರೆ.

ಪೋಷಕರು ಜಾಡು ಹಿಡಿದು ಹುಡುಕಿದಾಗ ಕೊಂಚ ದೂರದಲ್ಲಿ ಬಾಲಕನನ್ನು ಹುಲಿ ತಿಂದು ಹಾಕಿದ್ದು ಕಂಡು ಬಂದಿದೆ.  ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬಾರದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular